ವಾರ್ಡ್ ನಂ.17- ರಸ್ತೆಯಲ್ಲಿ ತಿರುಗಾಡಲು ಅಡ್ಡಿಯಾಗಿರುವ ಅರೆಬರೆ ಗ್ಯಾಸ್ ಪೈಪ್ ಅಳವಡಿಕೆ ಕಾಮಗಾರಿ. ರಾಯಚೂರು,ಅ.28- ನಗರದ ವಾರ್ಡ್ ನಂ.17 ರಲ್ಲಿ ಇತ್ತೀಚೇಗೆ ನಿರ್ಮಿಸಲಾದ ಸಿಸಿ ರಸ್ತೆ ಕಾಮಗಾರಿ ವೇಳೆ ಹಾಕಲಾದ ಗ್ಯಾಸ್ ಪೈಪ್ ಅಳವಡಿಕೆ ಅರೆಬರೆಯಾಗಿದ್ದು ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅಡತಡೆಯಾಗಿದೆ.
ಚೌಡಮ್ಮ ಕಟ್ಟಿ ದೇವಸ್ಥಾನ ಬಳಿ ಪೈಪ್ ಸುಳ್ಳಿ ರಸ್ತೆಯಲ್ಲಿ ಬಿದ್ದಿದೆ ಇದರಿಂದ ಅಪಘಾತವಾಗುವ ಸಂಭವವಿದ್ದು ಸಂಬಂಧಿಸಿದವರು ತೆರವುಗೊಳಿಸಬೇಕು ಅಲ್ಲದೆ ಸಿಸಿ ರಸ್ತೆ ಕಾಮಗಾರಿ ವೇಳೆ ಕ್ಯೂರಿಂಗ್ ಸಂದರ್ಭದಲ್ಲಿ ಜನರು ತಿರುಗಾಡದಂತೆ ಹಾಕಲಾದ ಮುಳ್ಳಿನ ಬೇಲಿ ಸರಿಯಾಗಿ ವಿಲೆವಾರಿಯಾಗದೆ ಹಾಗೆ ಬಿದ್ದಿವೆ ಅದನ್ನು ಸಹ ತೆರವುಗೊಳಸಬೇಕೆಂಬುದು ನಿವಾಸಿಗಳ ಆಗ್ರಹವಾಗಿದೆ.
Comments
Post a Comment