ಓಪೆಕ್ ಮಾದರಿ ಆಸ್ಪತ್ರೆಯನ್ನಾಗಿಸಲು ಸಂಕಲ್ಪ: ಕೆಲವೇ ದಿನಗಳಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ನೇಮಕ- ರಮೇಶ.ಸಿ.ಸಾಗರ್. ರಾಯಚೂರು,ಅ.30- ಓಪೆಕ್ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲು ಸಂಕಲ್ಪಿಸಲಾಗಿದೆ ಎಂದು ಓಪೆಕ್ ನೆರವಿನ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷ ಕರ್ತವ್ಯಾಧಿಕಾರಿ ರಮೇಶ್.ಸಿ.ಸಾಗರ್ ಹೇಳಿದರು. ಅವರಿಂದು ಓಪೆಕ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ಕಳೆದ ಮೂರು ವಾರದ ಹಿಂದೆ ಈ ಹುದ್ದೆ ಅಲಂಕರಿಸಿದ್ದು ಓಪೆಕ್ ಆಸ್ಪತ್ರೆ ಈ ಹಿಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿತ್ತೋ ಅದೆ ಮಾದರಿಯಲ್ಲಿ ಎಲ್ಲಾ ವಿಭಾಗಗಳ ಕಾರ್ಯನಿರ್ವಹಣೆ ಮಾಡುವಂತೆ ಪ್ರಯತ್ನಿಸಲಾಗುವುದು ಎಂದರು. ಸಾರ್ವಜನಿಕರಲ್ಲಿ ಸಕಾರಾತ್ಮಕವಾದ ಭಾವನೆ ಮೂಡುವಂತೆ ಮಾಡುತ್ತೇವೆಂದ ಅವರು ಮೆಟ್ರೋ ಮಹಾನಗರಗಳಲ್ಲಿ ದೊರೆಯುವ ಆರೋಗ್ಯ ಸೇವೆ ಸಿಗುವಂತೆ ಮಾಡುತ್ತೇವೆಂದರು.
ಕಟ್ಟಡದ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. ಈಗಾಗಲೆ ಕೆಲ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಅತಿ ಶೀಘ್ರದಲ್ಲೆ ನರ ರೋಗ ಶಸ್ತ್ರ ಚಿಕಿತ್ಸ ಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚು ಮಾರಕವಾಗುತ್ತಿದ್ದು ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಉಲ್ಬಣಿಸುತ್ತಿದೆ ಎಂದ ಅವರು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಬಾಧಿಸುತ್ತಿದ್ದು ರೋಗಿಗಳು ಸೂಕ್ತ ಚಿಕಿತ್ಸೆ ಮತ್ತು ವೈದ್ಯರ ಸಲಹೆ ಪಾಲಿಸಿದರೆ ಶೀಘ್ರ ಗುಣಮುಖ ರಾಗುತೇವೆಂದರು. ಸತ್ಯಸಾಯಿ ಫೌಂಡೇಶನ್ ಪದಾಧಿಕಾರಿಗಳು ಈ ಹಿಂದೆ ಆಸ್ಪತ್ರೆಗೆ ಭೇಟಿ ನೀಡದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಹಿಂದೆಯಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆಯುತೇನೆ ಎಂದರು.
Comments
Post a Comment