ಒಳ ಮೀಸಲಾತಿ ಜಾರಿ ಕುರಿತು ಮತ್ತೊಂದು ಆಯೋಗ ರಚನೆ ಅನಗತ್ಯ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ- ಎಂ.ವಿರುಪಾಕ್ಷಿ ರಾಯಚೂರು,ಅ.29- ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗ ರಚನೆಗೆ ಮುಂದಾಗಿದ್ದು ಅನಗತ್ಯವೆಂದು ಒಳ ಮೀಸಲಾತಿ ಐಕ್ಯತಾ ಹೋರಾಟ ಸಮಿತಿ ಸಂಚಾಲಕ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯಸರ್ಕಾರ ಉಪ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಓಟು ಹಿಡಿದಿಟ್ಟುಕೊಳ್ಳಲು ಇಂತಹ ತೀರ್ಮಾನ ಮಾಡಿದೆ ಎಂದು ದೂರಿದರು.
ಈಗಾಗಲೆ ಸುಪ್ರೀಂ ಕೋರ್ಟ್ ಏಳು ಜನ ನ್ಯಾಯಾಧೀಶರು ನೀಡಿದ ತೀರ್ಪಿನ್ನು ಲೆಕ್ಕಿಸದೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹೇಳಿದ್ದು ಎಷ್ಟು ಸರಿ ಎಂದರು. ಜೆ.ಸಿ.ಮಾಧುಸ್ವಾಮಿ ಶಿಫಾರಸ್ಸಿನನ್ವಯ ಮೀಸಲಾತಿ ಜಾರಿಗೆ ಸರಳ ಸೂತ್ರವಿದ್ದರು ವಿಳಂಬತೆ ಅನುಸರಿಸಲು ಆಯೋಗ ರಚನೆ ಮುಂದಾಗಿದ್ದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಕರೆ ನೀಡಿದರು. ಈಗಾಗಲೆ ಸರ್ಕಾರವೆ ರಚಿಸಿದ ಕಾಂತರಾಜು ಆಯೋಗ ವರದಿ ಮಂಡನೆಗೆ ಒಕ್ಕಲಿಗ ಮತ್ತು ಲಿಂಗಾಯತ ಸಮಾಜ ವಿರೋಧಿ ವ್ಯಕ್ತ ಪಡಿಸಿವೆ ಆದ್ದರಿಂದ ಮುಂಬರುವ ದಿನಗಳಲ್ಲಿ ಒಳ ಮೀಸಲಾತಿ ಆಯೋಗ ವರದಿಯನ್ನು ವಿರೋಧಿಸುವ ಮನಸ್ಥಿತಿಯುಳ್ಳವರು ಇರುವುದರಿಂದ ಆಯೋಗ ರಚನೆ ಕಣ್ಣೊರೆಸುವ ತಂತ್ರದ ಭಾಗವಾಗಿದೆ ಎಂದು ಆರೋಪಿಸಿದರು. ಸರ್ಕಾರ ವಿವಿಧ ಹುದ್ದೆಗಳ ನೇಮಕ ತಡೆಹಿಡಿದಿದ್ದರು ಈಗಾಗಲೆ ಅನೇಕ ಹುದ್ದೇಗೆ ಅಧಿಸೂಚನೆ ಹೊರಡಿಸಲಾಗಿದೆ ಅದನ್ನು ನಿಲ್ಲಿಸಲು ಹೇಗೆ ಸಾಧ್ಯವೆಂದರು. ಸಂದರ್ಭದಲ್ಲಿ ರವೀಂದ್ರ ಜಲ್ದಾರ್,ಜೆ.ಬಿ.ರಾಜು, ಮೌನೇಶ್, ಶಂಕ್ರಪ್ಪ ಇನ್ನಿತರರು ಇದ್ದರು.
Comments
Post a Comment