ಹೆಲ್ಮೆಟ್ ಕಡ್ಡಾಯಕ್ಕೆ ವಾಹನ ಸವಾರರು ಡೋಂಟ್ ಕೇರ್ : ಜಾಗೃತಿ ಕೊರತೆಯೋ ಅಥವಾ ಹೆಲ್ಮೆಟ್ ಧರಿಸಲು ಉದಾಸೀನತೆಯೋ? ರಾಯಚೂರು,ನ.1- ಇಂದಿನಿಂದ ಹೆಲ್ಮೆಟ್ ಕಡ್ಡಾಯವೆಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾರಿ ಸಾರಿ ಹೇಳಿದರು ದ್ವಿಚಕ್ರ ವಾಹನ ಸವಾರರು ಡೋಂಟ್ ಕೇರ್ ಎನ್ನುವ ದೃಶ್ಯ ನಗರದ ರಸ್ತೆಗಳಲ್ಲಿ ಕಂಡುಬಂದಿತು. ರಸ್ತೆ ಅಪಘಾತಗಳು ಮತ್ತು ಸಾವು ನೋವು ತಡೆಯುವ ಭಾಗವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ವೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಮತ್ತು ಸಂಚಾರಿ ಗಸ್ತು ವಾಹನದ ಮೂಲಕ ಜಾಗೃತಿ ಮೂಡಿಸಿದರು ಹೆಲ್ಮೆಟ್ ಕಡ್ಡಾಯ ಕೇವಲ ಘೋಷಣೆಗೆ ಸೀಮಿತ ಎಂಬುದು ನಗರದಲ್ಲಿ ಕಂಡು ಬಂದಿತು.
ಸರ್ಕಾರ ಏನೇ ಯೋಜನೆಗಳು ಮತ್ತು ಕಾನೂನು ಜಾರಿಗೆ ತಂದರೂ ಜನರಲ್ಲಿ ಅದರ ಬಗ್ಗೆ ಅರಿವು ಬಾರದಿರುವುದು ವಿಪರ್ಯಾಸವೆ ಸರಿ. ಮೊದಲದಿನವೆಂದು ತಪಾಸಣೆ ಕಠಿಣಗೊಳಿಸಲು ಪೊಲೀಸ್ ಇಲಾಖೆ ಹೋಗದಿರಬಹುದು ಆದರೆ ಅಪಘಾತಗಳು ಹೇಳಿ ಕೇಳಿ ಆಗುವುದಿಲ್ಲ ಸೂಕ್ತ ಸುರಕ್ಷತಾ ಕ್ರಮ ಹಾಗೂ ರಸ್ತೆ ನಿಯಮ ಪಾಲನೆಗೆ ನಾಗರೀಕರು ಒತ್ತು ನೀಡ ಬೇಕಿರುವುದು ಅತ್ಯವಶ್ಯಕವಾಗಿದೆ ಸಂವಿಧಾನ ನಮಗೆ ಹಕ್ಕು ನೀಡಿರುವುದು ಮಾತ್ರವಲ್ಲ ನಾವು ನಮ್ಮ ಕರ್ತವ್ಯವು ಗಣನೆಗೆ ತೆಗೆದುಕೊಳ್ಳಬೇಕು.. ಇನ್ನಾದರು ಹೆಲ್ಮೆಟ್ ಕಡ್ಡಾಯವೆಂಬ ನಿಯಮ ಪಾಲನೆಯಾಗಲಿ ಎನ್ನುವುದು ಜಯಧ್ವಜ ಕಳಕಳಿಯಾಗಿದೆ.
Comments
Post a Comment