ಒಳ ಮೀಸಲಾತಿ ಮತ್ತು ಕಾಂತರಾಜ್ ವರದಿ ಜಾರಿಗೆ ಮೀನಾಮೇಷ ಮಾಡಿದರೆ ನ.12ಕ್ಕೆ ಸಚಿವರು, ಶಾಸಕರ ಮನೆಗೆ ಮುತ್ತಿಗೆ. ರಾಯಚೂರು,ಅ.28-ಒಳ ಮೀಸಲಾತಿ ಮತ್ತು ಕಾಂತರಾಜ್ ವರದಿ ಜಾರಿಗೆ ಮೀನಾಮೇಷ ಮಾಡಿದರೆ ನ.12ಕ್ಕೆ ಸಚಿವರು, ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ.1 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದರು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ಮೀನಾಮೇಷ ಮಾಡುತ್ತಿದೆ ಅಲ್ಲದೆ ಕಾಂತರಾಜು ವರದಿ ಮಂಡನೆಗೂ ಲಿಂಗಾಯಿತ ಸಮಾಜ ವಿರೋಧಿಸುತ್ತಿದೆ ಅದಕ್ಕೆ ಸಿಎಂ ಮಣೆ ಹಾಕದೆ ಕೂಡಲೆ ಒಳಮೀಸಲಾತಿ ಮತ್ತು ಕಾಂತರಾಜು ವರದಿ ಜಾರಿಗೊಳಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ನ.12 ರಂದು ಸಚಿವರು, ಶಾಸಕರು ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಮೂರು ಉಪ ಚುನಾವಣೆಯಲ್ಲಿ ಯಾರಿಗೆ ಬೆಂಬಲಿಸಬೇಕೆಂದು ಪಕ್ಷ ತೀರ್ಮಾನಿಸಿಲ್ಲವೆಂದರು. ಈ ಸಂದರ್ಭದಲ್ಲಿ ವೈ.ನರಸಪ್ಪ, ಕೆ.ವಿ.ವಾಸು, ಪ್ರಭು ದಳಪತಿ, ಆದನಗೌಡ,ಹಾಜಿ ಸಾಬ್,ಹಿರೇಬೂದೂರು, ವೆಂಕನಗೌಡ ನಾಯಕ ವಕೀಲ್ ಇನ್ನಿತರರು ಇದ್ದರು.
Comments
Post a Comment