ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ) ಸಭೆ: ನಿಮ್ಮ ಪಾಂಡಿತ್ಯ ತೋರಿಸಲು ಬರಬೇಡಿ-ಜಿ.ಕುಮಾರ ನಾಯಕ. ರಾಯಚೂರು,ಅ.25- ಸಭೆಯಲ್ಲಿ ನನಗೆ ನಿಮ್ಮ ಪಾಂಡಿತ್ಯ ತೋರಿಸಬೇಡಿ ಎಂದು ಅಧಿಕಾರಿಗೆ ಸಂಸದ ಜಿ.ಕುಮಾರ ನಾಯಕ ತರಾಟೆ ತೆಗೆದುಕೊಂಡು ನರ್ಸಿಂಗ್ ನಡೆಯಿತು. ಇಂದು ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ) ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿ ಸಮಜಾಯಿಷಿ ನೀಡಿದಾಗ ಗ್ರಾಂ ಆದ ಸಂಸದರು ನಿಗದಿತ ವೇಳೆ ಪೂರ್ಣವಾಗಿದ್ದರೂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಹೆದ್ದಾರಿ ಸೇತುವೆ ನಿರ್ಮಾಣ ಕಾಮಗಾರಿ ಏಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದರು ಆಗ ಅಧಿಕಾರಿ ತಾಂತ್ರಿಕ ಅಡಚಣೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ ಬಗ್ಗೆ ವಿವಿರಿಸಿದಾಗ ಸಂಸದರು ಅಧಿಕಾರಿಗಳು ಮುಂಚಿತವಾಗಿ ಇದೆಲ್ಲವನ್ನು ನಿರೀಕ್ಷಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಕಾಮಗಾರಿ ಪ್ರಗತಿ ಕುಂಠಿತವಾಗಲು ನಿಮ್ಮಂತಹ ಅಧಿಕಾರಿಗಳಿಗೆ ಕಾರಣವೆಂದು ತರಾಟೆ ತೆಗೆದುಕೊಂಡರು. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ಹೈದರಾಬಾದ್ ರಸ್ತೆಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸಿ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಹೆದ್ದಾರಿ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇನ್ನು ಮುಂದೆ ಅಪಘಾತವಾದಲ್ಲಿ ಅಧಿಕಾರಿಗಳು ಮೇಲೆಯೂ ಪ್ರಕರಣ ದಾಖಲಿಸಿ ಆಗ ಅವರು ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ಈಗಾಗಲೆ ಅವರಿಗೆ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಆದರೂ ಅವರು ಮಾಡಿಲ್ಲವೆಂದು ಸಭೆಯ ಗಮನಕ್ಕೆ ತಂದರು.
ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಮುದ್ರಾಧಾರಣೆ. ಜಯ ಧ್ವಜ ನ್ಯೂಸ್, ರಾಯಚೂರು,ಜು.17- ಉತ್ತರಾಧಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಗರಕ್ಕೆ ದಿಗ್ವಿಜಯಗೈದರು. ಬೆಳಿಗ್ಗೆ ನಗರದ ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನದಲ್ಲಿ ಮುದ್ರಾ ಧಾರಣೆ ನೆರವೇರಿಸಿದರು. ಸರತಿ ಸಾಲಿನಲ್ಲಿ ನಿಂತು ಶಿಷ್ಯರು ಹಾಗೂ ಭಕ್ತರು ಮುದ್ರಾ ಪಡೆದರು. ನಂತರ ಶ್ರೀಪಾದಂಗಳವರು ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು....
Comments
Post a Comment