ರಾಜಕೀಯವೆಂದರೆ  ಸಮಾಜದಲ್ಲಿರುವ ಸಮಸ್ಯೆ ವಿರುದ್ಧ ಹೋರಾಡುವುದು-ಸಸಿಕಾಂತ ಸೆಂತಿಲ್.                     ರಾಯಚೂರು,ಅ.26- ರಾಜಕೀಯವೆಂದರೆ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ  ಹೋರಾಡುವುದೇ ಆಗಿದೆ ಎಂದು ಸಂಸದ ಸಸಿಕಾಂತ್ ಸೆಂತಿಲ್ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈ ದಿನ ಡಾಟ್ ಕಾಮ್ ಪತ್ರಿಕಾ ಸಂಸ್ಥೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಈ ಹಿಂದೆ ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದೆ ಅಂದು ನನಗೆ ತೋರಿದ ಆತ್ಮೀಯತೆ ಇಂದು ಸಹ ಅದೆ ರೀತಿಯಿದ್ದು ಕಿಂಚಿತ್ತು ಕಡಿಮೆಯಾಗಿಲ್ಲವೆಂದು ಸಂತಸ ವ್ಯಕ್ತಪಡಿಸಿದರು. ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಮಿಳುನಾಡಿನ ತಿರುವೆಳ್ಳೂರು ಕ್ಷೇತ್ರದಿಂದ ಜಯಗಳಿಸಿದೆ ಎಂದರು. ನಾನು ನನ್ನ ಕುಟುಂಬಕ್ಕೆ ಆಭಾರಿಯಾಗಿದ್ದೇನೆ ನನ್ನ ತಂದೆ ತಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬರು ಮನೆಗೆ ಮತ್ತೊಬ್ಬರು ದೇಶಕ್ಕೆ ಎಂದು ನಿರ್ಧರಿಸಿ ನನಗೆ ಐಎಎಸ್ ವ್ಯಾಸಂಗಕ್ಕೆ ಕಳುಹಿಸಿದರು ನಂತರ ನಾನು ಡಿಸಿಯಾದೆ ತದನಂತರ ನನ್ನ ಸ್ನೇಹಿತೆಯನ್ನು ಮದುವೆಯಾದೆ ನಮಗೆ ಮಕ್ಕಳು ಬೇಡವೆಂದು ನಿರ್ಧರಿಸಿದೆ ಅದಕ್ಕೆ ಕಾರಣ ಮಕ್ಕಳು ಸಂಸಾರವೆಂದಾದರೆ ದೇಶಕ್ಕೆ ಸಮಯ ನೀಡಲು ಆಗುವುದಿಲ್ಲವೆಂದು ಎಂದರು.

ರಾಜಕೀಯವೆಂದರೆ ಚುನಾವಣೆಗೆ ನಿಂತು ಗೆಲ್ಲುವುದು ಮಾತ್ರವಲ್ಲ ಬದಲಾಗಿ ಸಮಾಜದಲ್ಲಿರುವ ಸಮಸ್ಯೆಗೆ ಧ್ವನಿಯಾಗಿ ನಿಲ್ಲುವುದು ಸಹ ರಾಜಕೀಯವೆಂದರು. ಇಂದು ದೇಶದಲ್ಲಿ ಒಡೆದಾಳುವ ನೀತಿ ನಡೆಯುತ್ತಿದೆ ಆರೆಸ್ಸೆಸ್ ಸಮಾನತೆ ವಿರುದ್ಧವಿದ್ದು ದ್ವೇಷ ಭಾವನೆ ಕೆರಳಿಸುವ ಕಾರ್ಯ ಮಾಡುತ್ತಿದೆ ಎಂದು ದೂರಿದ ಅವರು ಅಂಬೇಡ್ಕರ ರವರಿಗೆ ಕಾಂಗ್ರೆಸ್ ಅವಮಾನಿಸಿತ್ತು ಅವರನ್ನು ಸೋಲಿಸಿತು ಮತ್ತು ಅವರ ಶವ ಸಂಸ್ಕಾರಕ್ಕೂ ಸ್ಥಳ ನೀಡಿಲ್ಲವೆಂದು ಅಪಪ್ರಚಾರ ಮಾಡಿ ವಿಭಜನೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಆರೆಸ್ಸೆಸ್ ಸಂವಿಧಾನ ಬದಲಾವಣೆ ಮಾಡುವವರು ಪರವಿದೆ ಎಂದರು. 

               

ಸಂವಾದದಲ್ಲಿ ಒಳ ಮೀಸಲಾತಿ ಜಾರಿ ವಿಳಂಬ ಬಗ್ಗೆ ಅನೇಕರು ಪ್ರಶ್ನಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ನಿಧಾನ ಆದರೂ ಸರಿ ಒಳಮಿಸಲಾತಿ ಜಾರಿ ಮಾಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಒಂದು ಚಳುವಳಿಯಿದ್ದ ಹಾಗೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ ಯಾರನ್ನು ದ್ವೇಷಿಸುವುದಿಲ ಭಾರತೀಯರಾದವರು ಸಹೀಷ್ಣುಗಳಾಗಿರುವವರು ಎಂದರು. ಸಂವಾದದಲ್ಲಿ ಕೆ.ಜಿ.ವಿರೇಶ್, ಎಂ.ಆರ್.ಭೇರಿ, ನರಸಿಂಹಲು ಡಿ ಎಸ್ ಎಸ್, ಮಾರೆಮ್ಮ, ಜೆ.ಬಿ.ರಾಜು, ಪರಶುರಾಮ ಅರೋಲಿ ಸೇರಿದಂತೆ ಅನೇಕರು ಪ್ರಶ್ನೆ ಕೇಳಿದರು.                              ವೇದಿಕೆ ಮೇಲೆ ಡಾ.ವಾಸು ಹೆಚ್.ವಿ, ಅನೀಲಕುಮಾರ ಇನ್ನಿತರರು ಇದ್ದರು.
 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ