ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ        (ದಿಶಾ) ಸಭೆ:                       ನಿಮ್ಮ ಪಾಂಡಿತ್ಯ ತೋರಿಸಲು ಬರಬೇಡಿ- ಜಿ.ಕುಮಾರ ನಾಯಕ                                                                   ರಾಯಚೂರು,ಅ.25- ಸಭೆಯಲ್ಲಿ ನನಗೆ ನಿಮ್ಮ ಪಾಂಡಿತ್ಯ ತೋರಿಸಬೇಡಿ ಎಂದು ಅಧಿಕಾರಿಗೆ ಸಂಸದ ಜಿ.ಕುಮಾರ ನಾಯಕ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.                           ಇಂದು ಬೆಳಿಗ್ಗೆ ನಗರದ ಜಿ.ಪಂ ಸಭಾಂಗಣದಲ್ಲಿ  ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ)  ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಕೃಷ್ಣಾನದಿ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿ ಸಮಜಾಯಿಷಿ ನೀಡಿದಾಗ ಗರಂ ಆದ ಸಂಸದರು ನಿಗದಿತ ವೇಳೆ ಪೂರ್ಣವಾಗಿದ್ದರೂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ  ಹೆದ್ದಾರಿ ಸೇತುವೆ ನಿರ್ಮಾಣ ಕಾಮಗಾರಿ ಏಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದರು ಆಗ ಅಧಿಕಾರಿ ತಾಂತ್ರಿಕ ಅಡಚಣೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ ಬಗ್ಗೆ ವಿವರಿಸಿದಾಗ ಸಂಸದರು ತರಾಟೆ ತೆಗೆದುಕೊಂಡು ಅಧಿಕಾರಿಗಳು ಮುಂಚಿತವಾಗಿ ಇದೆಲ್ಲವನ್ನು ನಿರೀಕ್ಷಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಕಾಮಗಾರಿ ಪ್ರಗತಿ ಕುಂಠಿತವಾಗಲು ನಿಮ್ಮಂತಹ ಅಧಿಕಾರಿಗಳೆ ಕಾರಣವೆಂದು ತರಾಟೆ ತೆಗೆದುಕೊಂಡರು.

ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ಹೈದರಾಬಾದ್ ರಸ್ತೆಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸಿ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಹೆದ್ದಾರಿ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿ ಇನ್ನು ಮುಂದೆ ಅಪಘಾತವಾದಲ್ಲಿ  ಹೆದ್ದಾರಿ ಅಧಿಕಾರಿಗಳ ಮೇಲೆಯೂ ಪ್ರಕರಣ ದಾಖಲಿಸಿ ಆಗ ಅವರು ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ಈಗಾಗಲೆ ಅವರಿಗೆ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಆದರೂ ಅವರು ಮಾಡಿಲ್ಲವೆಂದು ಸಭೆಯ ಗಮನಕ್ಕೆ ತಂದರು. 

 ಲೋಕೋಪಯೋಗಿ ಇಲಾಖೆ ರಸ್ತೆಗಳ ಪ್ರಗತಿ ಕುರಿತು ಎಇಇ ಸಭೆಗೆ ಮಾಹಿತಿ ನೀಡಿ ನ್ಯಾಯಾಲಯದಲ್ಲಿ ತಡೆ ಇರುವುದರಿಂದ ರಸ್ತೆ ಕಾಮಗಾರಿಗಳು ವಿಳಂಬವಾಗಿದೆ ಎಂದಾಗ ಸಂಸದರು ಇಂತಹ ನೆಪವನ್ನು ಹೇಳದೆ  ನ್ಯಾಯಾಲಯ ತಡೆಯಾಜ್ಞೆ ತೆರವು ಮಾಡಿ ರಸ್ತೆ ಕಾಮಗಾರಿ ಮುಗಿಸಿ ಎಂದರು.

ರೈಲ್ವೆ ಕಾಮಗಾರಿಗಳ ಬಗ್ಗೆ ಗಿಣಗೇರಿ ಮೆಹೆಬೂಬು ನಗರ ರೈಲ್ವೆ ಕಾಮಗಾರಿ ಭೂಸ್ವಾಧಿನದ ಬಗ್ಗೆ ರೈಲ್ವೆ ಭೂಸ್ವಾಧೀನಾಧಿಕಾರಿ ಮಾಹಿತಿ ನೀಡಿ ಭೂಸ್ವಾಧೀನ ಮುಗಿದಿದೆ ಆದರೆ ರೈತರು ತಮ್ಮ ಜಮೀನುಗಳಲ್ಲಿ ನಿಗದಿತ ಸ್ಥಳಕ್ಕಿಂತ ಹೆಚ್ಚಿನ ಸ್ಥಳವನ್ನು ಪಡೆದು ರೈಲ್ವೇ ಇಲಾಖೆ  ಕಲ್ಲು ಹಾಕಿದ್ದಾರೆ ಎಂಬ ಕೂಗು ಕೇಳಿಬಂದಿದೆ  ಎಂದು ಸಭೆಯಲ್ಲಿ ತಿಳಿಸಿದರು.                                ಕೃಷಿ ಇಲಾಖೆ ಕೇವಲ ಕಛೇರಿಯಲ್ಲಿ ಕುಳಿತು ಕೆಲಸ ಮಾಡದೆ ಗ್ರಾಮಗಳಿಗೆ ತೆರಳಿ ರೈತರಿಗೆ ಮಾಹಿತಿ ನೀಡಿ ಎಂದ ಅವರು ಬೆಳೆ ವಿಮೆ ಲೋಪ ಸರಿಪಡಿಸಲು ತಾಕೀತು ಮಾಡಿದರು. ತೋಟಗಾರಿಕೆ ಇಲಾಖೆ ರೈತರಿಗೆ ಹೆಚ್ಚಿನ ಸೌಲತ್ತು ನೀಡಬೇಕು ಎಂದರು. ಶಾಸಕ ಬಸನಗೌಡ ದದ್ದಲ್ ಮಾತನಾಡಿ ಈಗಾಗಲೆ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ಟೆಂಡರ್ ಆಗಿದೆ ಅದು ಆದಲ್ಲಿ ರೈತರಿಗೆ ಅನುಕೂಲವಾಗಲಿದೆ ಮತ್ತು ತೋಟಗಾರಿಕೆ ಇಲಾಖೆ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದರು.

  ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.                            ವೇದಿಕೆ ಮೇಲೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ , ಜಿಲ್ಲಾಧಿಕಾರಿ ನಿತೀಶ್.ಕೆ, ಜಿ.ಪಂ.ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಇದ್ದರು. ಸಭೆಯಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

      

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ