ಗ್ರಾಹಕರ ಕೈ ಸುಡುತ್ತಿರುವ ಪಟಾಕಿ : ಅನುಮತಿ ವಿಳಂಬ ವ್ಯಾಪಾರಕ್ಕೆ ಹೊಡೆತ. ರಾಯಚೂರು,ಅ.30- ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡುವ ಪಟಾಕಿ ಗ್ರಾಹಕರ ಕೈ ಮತ್ತು ಜೇಬು ಸುಡುತ್ತಿದೆ. ನಗರದ ವಾಲ್ ಕಟ್ ಮೈದಾನದಲ್ಲಿ ಸುಮಾರು 38 ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು ಪಟಾಕಿ ಮಳಿಗೆಗಳಿಗೆ ಅನುಮತಿ ವಿಳಂಬವಾಗಿ ಲಭಿಸಿದ್ದರಿಂದ ವ್ಯಾಪಾರದಲ್ಲಿ ಕೊಂಚ ಹೊಡೆತ ಬೀಳುತ್ತದೆ ಎಂದು ಪಟಾಕಿ ವ್ಯಾಪಾರಸ್ಥರು ಅಳಲು ವ್ಯಕ್ತಪಡಿಸುತ್ತಾರೆ ಅಲ್ಲದೆ ಒಂದು ವಾರಕ್ಕೆ ಸೀಮಿತವಾಗಿ ಅನುಮತಿ ನೀಡಲಾಗಿದೆ.
ಬುಧವಾರದಿಂದ ಪಟಾಕಿ ಮಾರಾಟ ಪ್ರಾರಂಭವಾದ ಕಾರಣ ಜನರು ಪಟಾಕಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ವಿವಿಧ ಬಗೆಯ ನೂತನ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ದರ ಏರಿಕೆ ಗ್ರಾಹಕರ ಕೈ ಜೊತೆ ಜೇಬು ಸುಡುತ್ತಿದೆ ನೆರೆಯ ತೆಲಂಗಾಣಕ್ಕೆ ಹೋಲಿಸಿದ್ದಲ್ಲಿ ದರ ಇಲ್ಲಿ ದುಪ್ಪಟ್ಟಾಗಿದೆ ಎಂದು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದರು.
Comments
Post a Comment