ಒಳ ಮೀಸಲಾತಿ ಜಾರಿಗಾಗಿ ಹೊಸ ಆಯೋಗ ರಚನೆಗೆ ತೀರ್ವ ಖಂಡನೆ- ನರಸಪ್ಪ ದಂಡೋರಾ. ರಾಯಚೂರು,ಅ.30- ಒಳ ಮೀಸಲಾತಿ ಜಾರಿಗೊಳಿಸದೆ ದತ್ತಾಂಶ ಸಂಗ್ರಹಿಸಲು ಮತ್ತೊಂದು ಹೊಸ ಆಯೋಗ ರಚಿಸಿದ್ದು ಖಂಡನೀಯವೆಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ಒಳ ಮೀಸಲಾತಿಗಾಗಿ ಕಾಂಗ್ರೆಸ್ ಪಕ್ಷವೇ 12 ಕೋಟಿ ರೂ. ವೆಚ್ಚ ಮಾಡಿ ಸದಾಶಿವ ಆಯೋಗ ರಚಿಸಿ ನಿಖರ ಮಾಹಿತಿ ಪಡೆಯಲು ಆಯೋಗ ರಚಿಸಿತ್ತು ಇದೀಗ ಮತ್ತೋಮ್ಮೆ ಆಯೋಗ ರಚನೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಉಪ ಚುನಾವಣೆಯಲ್ಲಿ ಮತ ಚದುರದಂತೆ ತಡೆಯಲು ಮೂಗಿಗೆ ತುಪ್ಪ ಸವರುವ ಮತ್ತು ಇದರ ಹಿಂದೆ ಬಲಗೈ ಸಮುದಾಯದ ಸಚಿವರ ಕುತಂತ್ರ ಅಡಗಿರುವ ಶಂಕೆಯಿದ್ದು ಮಾದಿಗ ದಂಡೋರ ತೀರ್ವವಾಗಿ ಖಂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮಾನಪ್ಪ ಮೇಸ್ತ್ರೀ, ರಂಜಿತ ದಂಡೋರ,ದುಳ್ಳಯ್ಯ ಗುಂಜಹಳ್ಳಿ,ನರಸಿಂಹಲು, ಹನುಮಂತು ಜುಲಂಗೇರಿ, ಯಲ್ಲಪ್ಪ ರಾಂಪೂರು ಇನ್ನಿತರರು ಇದ್ದರು.
Comments
Post a Comment