ಕಾಲಮಿತಿಯಲ್ಲಿ ದತ್ತಾಂಶ ಸಂಗ್ರಹಿಸಿ ಒಳ ಮೀಸಲಾತಿ ಜಾರಿ ಮಾಡಿ- ಎಸ್. ಮಾರೆಪ್ಪ. ರಾಯಚೂರು,ಅ.29- ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯ ಸ್ವಾಗತ ಆದರೆ ಕಾಲ ಮಿತಿಯಲ್ಲಿ ದತ್ತಾಂಶ ಸಂಗ್ರಹಿಸಿ ಒಳ ಮೀಸಲಾತಿ ಜಾರಿಯಾಗಬೇಕು ಎಂದು ಎಸ್.ಮಾರೆಪ್ಪ ವಕೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿಗೆ ಆಯೋಗ ರಚನೆ ತೀರ್ಮಾನ ಮಾಡಿರುವ ಸರ್ಕಾರ ಕಾಲ ಮಿತಿಯಲ್ಲಿ ಜಾತಿಗಳ ಜನಸಂಖ್ಯೆ ದತ್ತಾಂಶ ಸಂಗ್ರಹಿಸಿ ತಪ್ಪದೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಮೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಿರಬಹುದು ಆದರೂ ನಾವು ಮೂರು ತಿಂಗಳು ಕಾಯುತ್ತೇವೆ ಒಳ ಮೀಸಲಾತಿ ಜಾರಿಯಾಗುವವರೆಗೂ ಸರ್ಕಾರ ಹುದ್ದೆಗಳ ನೇಮಕ ನಿಲ್ಲಿಸಬೇಕೆಂದ ಅವರು ಒಳ ಮೀಸಲಾತಿ ನಮ್ಮ ಹಕ್ಕು ಎಂದರು. ಉಪಚುನಾವಣೆಗೆ ನಮ್ಮ ಸಂಘಟನೆ ಯಾವ ನಡೆ ಅನುಸರಿಸಬೇಕೆಂದು ಎರೆಡು ಮೂರು ದಿನಗಳಲ್ಲಿ ತೀರ್ಮಾನಿಸುತ್ತೇವೆಂದರು. ಈ ಸಂದರ್ಭದಲ್ಲಿ ಎಂಆರ್ ಹೆಚ್ ಎಸ್ ಜಿಲ್ಲಾ ಉಪಾಧ್ಯಕ್ಷ ಆಂಜಿನೇಯ್ಯ ಉಟ್ಟೂರು, ಹೇಮರಾಜ್ ಅಸ್ಕಿಹಾಳ, ಶ್ರೀ ನಿವಾಸ್ ಕೊಪ್ಪರ,ನರಸಿಂಹಲು ಮರ್ಚೇಟಾಳ ಇನ್ನಿತರರು ಇದ್ದರು.
Comments
Post a Comment