ಡೊಂಗಾ ರಾಂಪೂರ ಗ್ರಾಮದಲ್ಲಿ ಅ.30 ರಂದು ಅಂತಾರಾಷ್ಟ್ರೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ
ರಾಯಚೂರು,ಅ.29- ರಾಯಚೂರು ಗ್ರಾಮಾಂತರ ತಾಲೂಕಿನ ಡೊಂಗಾ ರಾಂಪೂರ ಗ್ರಾಮದಲ್ಲಿ ಬುಧವಾರದಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಕಲಾವಿದರಿಂದ ಶಂಭಲ ಮಾಸ್ಟರ್ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿಂದುಸ್ತಾನಿ ,ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಜರುಗಲಿದೆ .
ಸಧೃಢವಾದ ಗಟ್ಟಿಯಾದ ನೆಲೆಗಟ್ಟಿನ ಪವಿತ್ರ ಸ್ಥಳವಾದ ದತ್ತ ಕೇತ್ರದಲ್ಲಿ ಏಳು ನದಿಗಳನ್ನೊಳಗೊಂಡ ನುಡುಗಡ್ಡೆಯ ಕರ್ನಾಟಕ ರಾಜ್ಯದ ರಾಯಚೂರು ಗ್ರಾಮಾಂತರ ತಾಲೂಕಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಹಿಂದುಸ್ಥಾನ ಸಂಗೀತದ ಕಾರ್ಯ ನಿರ್ವಹಣೆಯಲ್ಲಿ ಜಗತ್ಪಸಿದ್ದಿಯಾಗಿದೆ ಮತ್ತು ಕಥಕ್ ಹಾಗೂ ಭರತ ನಾಟ್ಯವನ್ನು ವಿಶಾಖಪಟ್ಟಣದ ಸಂಸ್ಥೆಯ ಅಡಿಯಲ್ಲಿರುವ ತಾರಕೇಶ್ವರ ಫೌಂಡೇಶನ್ ಮತ್ತು ರಾಯಚೂರಿನ ಭಕ್ತಾದಿಗಳು, ಸ್ವಾಮಿ ಪ್ರಜ್ಞಾ ಗುಹಾವಾಸಿಗಳ ಅಧ್ಯಕ್ಷತೆಯಲ್ಲಿ ಎರಡನೇ ವರ್ಷದ ಕಾರ್ಯಕ್ರಮ ರಾಯಚೂರು ಶಂಭಾಲಾ ಮಾಸ್ಟರ್ ಸಂಗೀತ ಸಮಾರೋಪದಲ್ಲಿ ಶ್ರೀಪಾದ ಶ್ರೀ ವಲ್ಲಭಾಚಾರ್ಯರು 600 ವರ್ಷಗಳ ಹಿಂದೆ ದೀರ್ಘವಾದ ತಪಸ್ಸು ಮಾಡಿದ ಮತ್ತು ಗುಹೆ ವಾಸಿಯಾದ ಕೃಷ್ಣಾ ನದಿಯಲ್ಲಿ ಜಲ ಸಮಾಧಿಯಾದ ಇವರ ಸ್ಮರಣಾರ್ಥಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ವಿವಿಧ ಮೂರು ತಂಡಗಳಿಂದ ಶಾಸ್ತ್ರೀಯ ಸಂಗೀತವನ್ನು ಆರಂಭಿಸಲಾಗುವುದು. 1. ಕು.ಬನಾನಿ ದಾಸ ಅವರ ಹಿಂದುಸ್ಥಾನೀ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲಿ ಒಂದಾದ ಸಂತೂರ ಶಾಸ್ತ್ರೀಯ ಸಂಗೀತವನ್ನು ನುಡಿಸುವರು 2. ಮಾ. ಸ್ಟುಪೂರ್ಣ ಘೋಷ್ ವೀಣಾ ವಾದನ ನುಡಿಸುವರು. 3. ಮಾ. ಆರ್ಕಿಸ್ಟ್ ಮನ್ ಸಿನ್ಹಾ ರಾಯ್ ತಬಲಾ ಬಾರಿಸುವರು. ಮೂರು ಜನ ಜಪತಾಳ ಏಕತಾಳ, ತೀನ್ ತಾಳ, ಹಂಸಧ್ವನಿ ರಾಗದ ನೆರಳಿನಲ್ಲಿ ವಿವಿಧ ರೀತಿಯಲ್ಲಿ ಮನರಂಜಿಸುವರು.
ಮೈಸೂರು ಬಿ. ನಾಗರಾಜ ಶಿಶ್ಯರಾದ ವಿದ್ವತ್ ನಾರಾಯಣಜಿ ರವರಿಂದ 40 ನಿಮಿಷ ಕಥಕ್ ನೃತ್ಯ ಮಾಡುವುದರೊಂದಿಗೆ ಕಾರ್ಯಕ್ರಮ ಸಂಯೋಜಿಸಲಾಗಿದೆ.
ಉತ್ಸಾಹಿ ಚೇತನಾಶೀಲರಾದ ಬೆಂಗಳೂರು ತಂಡದ ವತಿಯಿಂದ ಭಗವಾನ್ ಶಿವ ಮತ್ತು ಕೃಷ್ಣ ಇವರ ಕುರಿತು ವಾಚನ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಂಗಳೂರಿನ ಯಶಸ್ವಿನಿ ಶಿವರಾಮರವರಿಂದ ಭರತ ನಾಟ್ಯವನ್ನು ಪ್ರದರ್ಶನ ಇರುತ್ತದೆ.
ಸಂಗೀತ ಪ್ರೇಮಿಗಳು, ಆಧ್ಯಾತ್ಮಿಕ ಚಿಂತಕರು, ರಾಯಚೂರು ಜಿಲ್ಲೆಯ ನಾಗರಿಕರು ಈ ಸಂಗೀತ ಹಾಗೂ ನೃತ್ಯದ ಹಬ್ಬದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರು ವಿನಂತಿಸಿದ್ದಾರೆ.
Comments
Post a Comment