ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಸಾಧಕರಿಗೆ ನಾಳೆ ಸನ್ಮಾನ- ಜಿಲ್ಲಾಧಿಕಾರಿ ನಿತೀಶ್ ಕೆ.
ರಾಯಚೂರು,ಅ.31- ಕರ್ನಾಟಕ ರಾಜ್ಯೋತ್ಸವ-2024ರ ಅಂಗವಾಗಿ ಕನ್ನಡ ನಾಡು, ನುಡಿ ಕುರಿತು ಸೇವೆ ಮಾಡಿದ ವಿವಿಧ ಸಾಧಕರಿಗೆ ಇದೇ ನ.01ರಂದು ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಿಂದ ಮಹಾಂತೇಶ ಮಸ್ಕಿ, ಪತ್ರಿಕೋದ್ಯಮ ಕ್ಷೇತ್ರದಿಂದ ಜನಕೂಗು ಪತ್ರಿಕೆ ಸಂಪಾದಕ ಜಿ.ವೀರಾರಡ್ಡಿ, ವೈದ್ಯಕೀಯ ಕ್ಷೇತ್ರದಿಂದ ಡಾ.ಶ್ರೀಶೈಲೇಶ ಎಸ್.ಅಮರ್‌ಖೇಡ (ಒಪೆಕ್ ಆಸ್ಪತ್ರೆ), ಸಂಸ್ಥೆ ಕ್ಷೇತ್ರದಿಂದ ಕರ್ನಾಟಕ ಸಂಘ ರಾಯಚೂರು, ಕೃಷಿ ಕ್ಷೇತ್ರದಿಂದ ಶರಣಬಸವ ಮಸ್ಕಿ ತಾಲ್ಲೂಕು ಯಕ್ಷಾಸಪೂರು, ಆಶ್ರಮ ಕ್ಷೇತ್ರದಿಂದ ಚನ್ನಬಸವಸ್ವಾಮಿ ಹಿರೇಮಠ ಕಾರುಣ್ಯ ನೆಲೆವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮ ಸಿಂಧನೂರು ಇವರು ಆಯ್ಕೆಯಾಗಿದ್ದು, ಆಯ್ಕೆಯಾದ ಗಣ್ಯರಿಗೆ ನ.01ರಂದು ಸನ್ಮಾನ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment