ಕಾಡ್ಲೂರು: ಮೇಧಾ ಪಬ್ಲಿಕ್ ಶಾಲೆಯಲ್ಲಿ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ರಾಯಚೂರು,ಅ.31- ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಶ್ರೀ ನಿಜಾನಂದ ಯೋಗಾಶ್ರಮ ಮಲದಕಲ್ ಸಂಯುಕ್ತಾಶ್ರಯದಲ್ಲಿ ಪರಮಾಪೂಜ್ಯ ಶ್ರೀ ಗುರುಬಸವ ರಾಜಗುರುಗಳ
ಮಾರ್ಗದರ್ಶನದಂತೆ ತಾಲೂಕಿನ ಕಾಡ್ಲೂರು ಗ್ರಾಮದ ಶ್ರೀ ಮೇಧಾ ಪಬ್ಲಿಕ್ ಶಾಲೆಯಲ್ಲಿ ಶಾಲಾಬ್ಯಾಗ್ ವಿತರಣೆ ಕಾರ್ಯಕ್ರಮ ನೆರವೇರಿತು. ಶಾಲೆಯ ಬಡ ಮಕ್ಕಳ ಬಗೆಗಿನ ಕಾಳಜಿಗೆ ಮತ್ತು ಶೈಕ್ಷಣಿಕ ಉನ್ನತಿಗೆ ಸೇವೆಗೈದ ಗುರುಗಳಿಗೆ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಯಮ್ಮ,ಜಿ.ಪಂ ಮಾಜಿ ಸದಸ್ಯ ಸತೀಶ್ ಕುಮಾರ್,ತಾ.ಪಂ ಸದಸ್ಯ ಎಸ್.ಎಫ್ ಖಾದ್ರಿ, ತಾ.ಪಂ.ಮಾಜಿ ಅಧ್ಯಕ್ಷ ಮಲ್ಲಪ್ಪ ಗೌಡ,ಗ್ರಾ.ಪಂ ಸದಸ್ಯರಾದ ಪಾಣಿ ನಿಂಗಪ್ಪ ಮಾರೆಪ್ಪ, ಜಮಷೇರ್ ಅಲಿ ಕೋತ್ವಾಲ್,ಚಂದ್ರು, ಮುಖಂಡರಾದ ಸಿದ್ದಣ್ಣ ಸಾಹುಕಾರ್,ನರಸಿಂಗಪ್ಪ ಅಮರ, ಪಾಂಡುರಂಗ, ಶಾಲಾ ಸಿಬ್ಬಂದಿ ಇಮಾಮ್ ಸಾಬ್ ಇನ್ನಿತರರು ಇದ್ದರು.
Comments
Post a Comment