ಕ್ರೀಡಾ ಚಟುವಟಿಕೆಗಳಿಂದ ಪತ್ರಕರ್ತರ ಒತ್ತಡ ನಿವಾರಣೆ ಸಾಧ್ಯ- ಜಿಲ್ಲಾಧಿಕಾರಿ ನಿತೀಶ್ ಕೆ:

ಸಂವಿಧಾನದ ಪೀಠಿಕೆ ಓದುವ ಮೂಲಕ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ


ರಾಯಚೂರು,26- ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನದ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಿಂದ ಆಯೋಜಿಸಿದ್ದ ಎರಡು ದಿನಗಳ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಚಾಲನೆ ನೀಡಿದರು.


ನಗರದ  ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಂವಿಧಾನ ಪೀಠಿಕೆ  ಪ್ರತಿಜ್ಞಾ ವಿಧಿ ಬೋಧಿಸಿದರು. ಸಂವಿಧಾನ ದಿನಾಚರಣೆ ಬಳಿಕ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಾಂಕೇತಿಕವಾಗಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕಂದಾಯ ಇಲಾಖೆ ,ಪೊಲೀಸ್ ಇಲಾಖೆ, ಪತ್ರಕರ್ತರ ತಂಡದ ನಡುವೆ ಪಂದ್ಯಾವಳಿ ಏರ್ಪಡಿಸಲಾಗಿದೆ.



ನಂತರ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿ ದಿನ ಜಿಲ್ಲೆಯಲ್ಲಿ ನಾನಾ ಸಮಸ್ಯೆಗಳ ಮೇಲೆ ಪತ್ರಕರ್ತರು ತಮ್ಮ ವರದಿ ಮೂಲಕ ಬೆಳಕು ಚೆಲ್ಲುತ್ತಿದ್ದೀರಿ.ಒತ್ತಡ ನಿವಾರಣೆಗೆ  ಇಂತಹ ಕ್ರೀಡಾಕೂಟ ಅನುಕೂಲವಾಗಲಿದೆ ಎಂದರು.

ಇಂತಹ ಕ್ರೀಡಾಕೂಟ ಮಾನಸಿಕ, ದೈಹಿಕ ಸದೃಢತೆಗೆ ಅನುಕೂಲ ಆಗಲಿದೆ. ಸರ್ಕಾರ ಮತ್ತು ನಾಗರೀಕರು ಸದಾ ಜಾಗೃತೆಯಾಗಿರಲು ಪ್ರಜೆಗಳಿಗೆ ವರದಿಗಾರರ ಪಾತ್ರ ದೊಡ್ಡದು. ಸ್ಪೂರ್ತಿದಾಯಕ ಕೆಲಸ ಮುಂದುವರಿಸಿ,  ರಾಯಚೂರಿನ ಅಭಿವೃದ್ಧಿಗೆ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು.



ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ಸ್ ಗಿಲ್ಡ್  ಅಧ್ಯಕ್ಷ ಚನ್ನಬಸವಣ್ಣ  ಮಾತನಾಡಿ, ೨೦೦೧ರಲ್ಲಿ  ಸಹಕಾರ ಸಂಘದಲ್ಲಿ ನೋಂದಣಿಯಾದ ಗಿಲ್ಡ್ ನಿಂದ, ಪತ್ರಕರ್ತರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ  ಜಾಗ ನೀಡಿದ್ದರು ಜನಪ್ರತಿ‌ನಿಧಿಗಳು ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ.ಸುದ್ದಿ ವಿಚಾರದಲ್ಲಿ ಅಧಿಕಾರಿಗಳ ಜೊತೆ ಸಂಘರ್ಷ ಇರಬಹುದು ಆದರೆ ಅಭಿವೃದ್ಧಿಗೆ ಪೂರಕ, ಸಮಸ್ಯೆಗಳನ್ನು ಗಮನಕ್ಕೆ ತರುವ ಪ್ರಯತ್ನ ಪತ್ರಕರ್ತರು ಸದಾ ಮಾಡುತ್ತೇವೆ.


ಗಿಲ್ಡ್ ನಿಂದ ಪತ್ರಕರ್ತರ ಅಪಘಾತ ವಿಮೆ ಮಾಡಿಸಿದ್ದೇವೆ. ಪತ್ರಕರ್ತರ ಅನಿವಾರ್ಯ ಅಗತ್ಯಗಳಿಗೆ ಸಹಾಯಧನ ನೀಡುವ ಮೂಲಕ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಗಿಲ್ಡ್ ಶ್ರಮಿಸುತ್ತಿದೆ ಎಂದರು. ಪತ್ರಕರ್ತರು ಎಂದು ಬಂದಾಗ ಯಾವುದೇ ಬೇಧವಿಲ್ಲದೆ ಸಹಕಾರ ನೀಡಲಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ತಹಶೀಲ್ದಾರ ಸುರೇಶ ವರ್ಮಾ, ಡಿವೈಎಸ್ ಪಿ ಪ್ರಮಾಣಾನಂದ ಘೋಡ್ಕೆ, ಯುವಜನ ಸೇವಾ ಕ್ರೀಡಾ ಇಲಾಖೆಯ ಉಪನಿರ್ದೇಶಕ ಈರೇಶ ನಾಯಕ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ಜಾಗಟಗಲ್, ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಹಾಗೂ ಇನ್ನಿತರ ಪತ್ರಕರ್ತರಿದ್ದರು. ಅಣ್ಣಪ್ಪಮೇಟಿಗೌಡ ನಿರೂಪಿಸಿದರೆ,ವೀರೇಶ್ ವಂದಿಸಿದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ