ನಾನು ಜೀವಂತವಿದ್ದರೂ ನನ್ನ ನಕಲಿ ಮರಣ ಪ್ರಮಾಣ ಪತ್ರ ಲಗತ್ತಿಸಿ ಜಮೀನು ಲಪಟಾಯಿಸಿದ್ದಾರೆ- ಬಸಪ್ಪ
.      ರಾಯಚೂರು,ನ.19- ನಾನು ಜೀವಂತವಿದ್ದರೂ ನನ್ನ ನಕಲಿ ಮರಣ ಪ್ರಮಾಣ ಪತ್ರ ನೀಡಿ ನನ್ನ ಜಮೀನು ಲಪಟಾಯಿಸಿದ್ದಾರೆ ಎಂದು ಜಮೀನು ಮಾಲೀಕ ಬಸ್ಸಪ್ಪ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿರವಾರ ತಾಲೂಕಿನ ಕಲಂಗೇರಾ ನಿವಾಸಿಯಾದ ನಾನು ನನ್ನ ನಕಲಿ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಿ ಪಹಣಿಯಲ್ಲಿ ನನ್ನ ಹೆಸರಿಗಿದ್ದ ಜಮೀನು ಮುಟೇಶನ್ ಮಾಡಿಸಿಕೊಳ್ಳಲಾಗಿದ್ದು ಜೀವಂತವಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಿರುವ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ ಆದರೆ ಕಂದಾಯ ನಿರೀಕ್ಷಕ ಮತ್ತು ತಪ್ಪಿತಸ್ಥ ಇತರೆ ಅಧಿಕಾರಿಗಳ ಮತ್ತು ಜಮೀನು ಲಪಟಾಯಿಸಿದವರ ಮೇಲೆಯೂ  ಕ್ರಮವಾಗಿ ಬೇಕೆಂದು ಆಗ್ರಹಿಸಿದ ಅವರು ನನ್ನ ಹೆಸರು ಮರಳಿ ಪಹಣಿಯಲ್ಲಿ ನಮೂದಿಸಬೇಕು ಮತ್ತು ಇದರಲ್ಲಿ ಭಾಗಿಯಾದವರ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಹನುಮಂತ ,ಹನುಮೇಶ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ