ಉತ್ತರಾಧಿ ಮಠಾಧೀಶರಿಂದ ವಿಶ್ವಮಿತ್ರ ಟ್ರಸ್ಟ್ ಉದ್ಘಾಟನೆ:
ಪರೋಪಕಾರದಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು
ರಾಯಚೂರು,ಜಯ ಧ್ವಜ ನ್ಯೂಸ್, ನ.27-
ನಾವೆಲ್ಲರೂ ಸಮಾಜಕ್ಕೆ ನಮ್ಮ ಶಕ್ತ್ಯಾ ನುಸಾರ ಕೊಡುಗೆ ನೀಡಬೇಕು ನಾವು ಮಾಡುವ ಪರೋಪಕಾರದಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು.
ಅವರು ಇತ್ತೀಚೆಗೆ ನಗರದ ಕರ್ನಾ ಟಕ ಸಂಘದಲ್ಲಿ ವಿಶ್ವಮಧ್ವ ಮಹಾಪರಿಷತ್ ಹಾಗೂ ಉತ್ತರಾಧಿ ಮಠದ ವತಿಯಿಂದ ಆಯೋಜಿಸಿದ ಜ್ಞಾನಸತ್ರ ಕಾರ್ಯ ಕ್ರಮದಲ್ಲಿ ವಿಶ್ವಮಿತ್ರ ಟ್ರಸ್ಟ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿ ಬ್ರಾಹ್ಮಣ ಸಮಾಜದಲ್ಲಿ ಅನೇಕರು ಆರ್ಥಿಕವಾಗಿ ಅಶಕ್ತರಿದ್ದು ಅವರ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯ ಸೌಲಭ್ಯ ಕಲ್ಪಿಸಲು ಉಳ್ಳವರು ಧನ ಸಹಾಯ ಮಾಡಬೇಕೆಂದರು.
ಒಳಿತನ್ನು ಚಿಂತಿಸು ಎಂಬ ಧೇಯದೊಂದಿಗೆ ಈ ವಿಶ್ವಮಿತ್ರ ಟ್ರಸ್ಟ ತನ್ನ ಕಾರ್ಯ ಮಾಡುತ್ತಿದ್ದು ಇದರಲ್ಲಿ ಗಣ್ಯ ಉದ್ಯಮಿಗಳು, ವೈದ್ಯರು, ನ್ಯಾಯವಾದಿಗಳು ಸೇರಿದಂತೆ ಅನೇಕರು ಇದ್ದಾರೆ ಎಂದರು.
ಸ್ಪರ್ದಾತ್ಮಕ ಪರೀಕ್ಷೆ ತರಬೇತಿ, ಉದ್ಯೋಗ ಸೃಷ್ಟಿ ಮುಂತಾದ ಕಾರ್ಯ ಹಮ್ಮಿಕೊಳ್ಳುತ್ತಿದ್ದು ಎಲ್ಲ ವಿಪ್ರರು ಇದಕ್ಕೆ ಕೈ ಜೋಡಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಮಿತ್ರ ಟ್ರಸ್ಟ್ ಅಧ್ಯಕ್ಷ ಡಿ.ಕೆ.ಮುರಳಿಧರ,ಟ್ರಸ್ಟ ಪದಾಧಿಕಾರಿಗಳಾದ ಡಾ.ಆನಂದತೀರ್ಥ ಫಡ್ನೀಸ್, ಪ್ರಹಲ್ಲಾದರಾವ್,ರಾಮ ರಾವ್ ಗಣೇಕಲ್,ವೇಣುಗೋಪಾಲ ಇನಾಂದಾರ್,ಅನೀಲ ಕುಮಾರ್ ಗಾರಲದಿನ್ನಿ,ವಿಷ್ಣುತೀರ್ಥ ಸಿರವಾರ್,ವೆಂಕಟೇಶ ನವಲಿ,ವೆಂಕಟೇಶ ಕೋಲಾರ್,ತಾರಾನಾಥ ಜೇಗರಕಲ್ ಸೇರಿದಂತೆ ಇನ್ನಿತರರು ಇದ್ದರು.
Comments
Post a Comment