ಫೋಟೋ ಜರ್ನಲಿಸ್ಟ್ ಸಂತೋಷ ಸಾಗರ್ ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

ರಾಯಚೂರು,ನ.28- ಫೋಟೋ ಜರ್ನಲಿಸ್ಟ್ ಸಂತೋಷ ಸಾಗರ ಅವರು ಬುಧವಾರದಂದು ನಿಧನರಾದ ಹಿನ್ನಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸಂತೋಷ ಸಾಗರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಒತ್ತಡದ ಮದ್ಯೆ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಬೇಕಿದೆ ಎಂದರು. ಸಂತೋಷ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದು, ಸಂಘದ ಮನವಿ ಮೇರೆಗೆ ಜಿಲ್ಲೆಯ ಪತ್ರಕರ್ತರು ಸಹಾಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದರು.


ಸದರ್ ಬಜಾರ್ ಪೋಲಿಸ್ ಠಾಣೆಯ ಸಿಪಿಐ ಉಮೇಶ ಕಾಂಬ್ಳೆ ಮಾತನಾಡಿ, ಸಂತೋಷ ಸಾಗರ್ ಅತ್ಯಂತ ಸರಳ ವ್ಯಕ್ತಿತ್ವ ಉಳ್ಳವರಾಗಿದ್ದು, ಎಲ್ಲರೊಂದಿಗೆ ಸಂತೋಷದಿಂದ ಇದ್ದು, ಅವರ ನಿಧನ ಅರಗಿಸಿಕೊಳ್ಳಲಾಗುತ್ತಿಲ್ಲ, ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಆರೋಗ್ಯ ಕಡೆಗೆ ಕಾಳಜಿ ವಹಿಸುವುದು ಕಡೆಯಾಗಿದೆ, ತಮ್ಮ ಆರೋಗ್ಯ ಜೊತೆಗೆ ತಮ್ಮ ಕುಟುಂಬದ ಆರೋಗ್ಯದ ಕಡೆಗೆ ಹೆಚ್ಚಾಗಿ ಕಾಳಜಿ ವಹಿಸಬೇಕು ಎಂದರು.


ಸಂತೋಷ ಸಾಗರ್ ಅವರ ಕುಟುಂಬ ಆರ್ಥಿಕ ಸ್ಥಿತಿಯಲ್ಲಿದ್ದು ಕುಟುಂಬ ನಿರ್ವಹಣೆಗೆ ಎಲ್ಲಾ ಪತ್ರಕರ್ತರು ಆರ್ಥಿಕ ಸಹಾಯ ಮಾಡಿದ್ದು, ಪೋಲಿಸ್ ಇಲಾಖೆ ಅಧಿಕಾರಿಗಳು ಸಹ ಆರ್ಥಿಕ ಸಹಕಾರ ಮಾಡುವುದಾಗಿ ತಿಳಿಸಿದರು.

ಹಿರಿಯ ಪತ್ರಕರ್ತರಾದ ಬಿ. ವೆಂಕಟಸಿಂಗ್, ಸಿದ್ದಯ್ಯ ಸ್ವಾಮಿ ಕುಕನೂರು, ಚೆನ್ನಬಸವ ಬಾಗಲವಾಡ, ಜಗನ್ನಾಥ ಪೂಜಾರ್, ಖಾನ್‌ಸಾಬ್ ಮೋಮಿನ್, ಶ್ರೀನಿವಾಸ ಇನಾಂದಾರ್, ಅಣ್ಣಪ್ಪ ಮೇಟಿಗೌಡ, ರಾಚಯ್ಯಸ್ವಾಮಿ, ಜಯಕುಮಾರ ದೇಸಾಯಿ ಕಾಡ್ಲೂರು ಮಾತನಾಡಿದರು.


ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಹಿರಿಯ ಪತ್ರಕರ್ತರಾದ ದತ್ತು ಸರ್ಕಿಲ್, ಭೀಮೇಶ ಪೂಜಾರ್, ಚನ್ನಬಸವಣ್ಣ, ಕೆ.ಸತ್ಯನಾರಾಯಾಣ, ಧಿರೇಂದ್ರ ಕುಲಕರ್ಣಿ,   ಮಲ್ಲಿಕಾರ್ಜುನ ಸ್ವಾಮಿ, ರಾಮಕೃಷ್ಣ, ಪ್ರಸನ್ನಕುಮಾರ ಜೈನ್,  ಮಹಾನಂದ, ಮುತ್ತಣ್ಣ ಹೇಳವರ್,  ದುರುಗೇಶ, ಅಬ್ದುಲ್ ಖಾದರ್, ಬಾವಸಲಿ,  ಅನಿಲ್ ಕುಮಾರ, ನರಸಪ್ಪ, ಮಲ್ಲಪ್ಪ, ಅಯ್ಯಪ್ಪ ಪಿಕಲಿಹಾಳ, ಶಿವುಕುಮಾರ, ತಾಯಪ್ಪ, ಹನುಮಂತ ಸೇರಿದಂತೆ ಅನೇಕ ಪತ್ರಕರ್ತರು ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ