ಗಾಯಿತ್ರಿ ಭವನ ಕಟ್ಟಡ ಶೀಘ್ರ ಪೂರ್ಣಗೊಳ್ಳಲಿ-ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು
ಜಯಧ್ವಜ ನ್ಯೂಸ್, ರಾಯಚೂರು,ನ.29-
ನಗರದ ನವೋದಯ ವೈದ್ಯಕೀಯ ಕಾಲೇಜು ಬಳಿ ನಿರ್ಮಾಣ ಹಂತದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಜಿಲ್ಲಾ ಘಟಕ ಅಧೀನದ ಗಾಯಿತ್ರಿ ಭವನ ಕಟ್ಟಡಕ್ಕೆ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಗುರುವಾರ ಸಾಯಿಂಕಾಲ ಭೇಟಿ ನೀಡಿ ಕಟ್ಟಡ ಶೀಘ್ರ ಪೂರ್ಣಗೊಳ್ಳಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಕಟ್ಟಡ ವಿನ್ಯಾಸ ಮತ್ತು ಕಟ್ಟಡದ ಬಗ್ಗೆ ತಿಳಿದುಕೊಂಡ ಶ್ರೀಪಾದಂಗಳವರು, ಯಾವುದೆ ಗೊಂದಲಗಳಿಗೆ ಆಸ್ಪದ ನೀಡದೆ ಎಲ್ಲ ವಿಪ್ರರು ಒಗಟ್ಟಿನಿಂದ ಕಟ್ಟಡ ಪೂರ್ಣಗೊಳ್ಳಲು ಸಹಕಾರ ನೀಡಬೇಕೆಂದು ಹೇಳಿದ ಅವರು ಬ್ರಾಹ್ಮಣ ಸಮಾಜಕ್ಕೆ ಈ ಕಟ್ಟಡ ಸದುಪಯೋಗವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ನರಸಿಂಗರಾವ ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಜಿಲ್ಲಾ ಘಟಕ ಅಧ್ಯಕ್ಷ ಡಿ.ಕೆ.ಮುರಳೀಧರ್, ಅರವಿಂದ ಕುಲಕರ್ಣಿ, ರಾಘವೇಂದ್ರ ಚೂಡಾಮಣೀ ವಕೀಲ, ಪ್ರಹ್ಲಾದರಾವ ಕಲ್ಮಲಾ, ರಾಮರಾವ ಗಣೇಕಲ್, ವೆಂಕಟರಾವ್ ಕುಲಕರ್ಣೀ, ಹನುಮೇಶ ಸರಾಫ,ವೆಂಕಟೇಶ ಕೋಲಾರ, ಕೃಷ್ಣ ಮೂರ್ತಿ ಹೆಬಸೂರು, ನರಸಿಂಗರಾವ್ , ರಾಘವೇಂದ್ರರಾವ್ ಗುಂಜಳ್ಳಿ, ಪ್ರಹ್ಲಾದ, ಜಯಕುಮಾರ್ ದೇಸಾಯಿ ಕಾಡ್ಲೂರು, ಗುರುರಾಜ ರಾವ್,ರಾಘವೇಂದ್ರ ದೇಶಪಾಂಡೆ, ರಂಗಾಚಾರ್ ಇನ್ನಿತರರು ಇದ್ದರು.
Comments
Post a Comment