ಪೊಲೀಸ್ ಅಧಿಕಾರಿಗಳ- ಪತ್ರಕರ್ತ ತಂಡಗಳ ಮಧ್ಯ ಕ್ರಿಕೆಟ್ ಪಂದ್ಯಾವಳಿಗೆ ಎಸ್ಪಿ ಚಾಲನೆ:

ಲೇಖನಿ ವಿರುದ್ಧ ಜಯ ಸಾಧಿಸಿದ ಲಾಠಿ


ಜಯ ಧ್ವಜ ನ್ಯೂಸ್, ರಾಯಚೂರು, ನ.30-

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಪೊಲೀಸ್ ಅಧಿಕಾರಿಗಳ ತಂಡ ಮತ್ತು ಪತ್ರಕರ್ತರ ತಂಡದ ನಡುವೆ  ಕ್ರಿಕೆಟ್ ಪಂದ್ಯಾವಳಿ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆಯಿತು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಬ್ಯಾಟ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಮಾತನಾಡಿದ ಅವರು ಪೊಲೀಸ್ ಅಧಿಕಾರಿಗಳ ಮತ್ತು ಪತ್ರಕರ್ತರು  ಅತ್ಯುತ್ತಮ ಪ್ರದರ್ಶನ   ಮಾಡುವುದರ ಮೂಲಕ ಗೆಲುವು ಸಾಧಿಸಿ ಎಂದು ಶುಭ ಹಾರೈಸಿದರು.



ಲೇಖನಿ ವಿರುದ್ಧ ಜಯ ಸಾಧಿಸಿದ ಲಾಠಿ:

ಪತ್ರಕರ್ತರ (ಎ) ತಂಡ ಟಾಸ್ ಗೆಲ್ಲುವ ಮೂಲಕ ಫೀಲ್ಡಿಂಗ ಆಯ್ಕೆ ಮಾಡಿಕೊಂಡಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಪೊಲೀಸ ತಂಡ 8 ಓವರ್ ಗಳಲ್ಲಿ  4 ವಿಕೇಟುಗಳನ್ನು ಕಳೆದುಕೊಂಡ  66 ರನ್ ಗಳನ್ನು ಗಳಿಸಿತು.


ನಂತರ ಪತ್ರಕರ್ತರ   ತಂಡ ಬ್ಯಾಟಿಂಗ ಆರಂಭಿಸಿ 51 ರನ್ ಗಳಿಸಿ 15 ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು. 


 2ನೇ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 8 ಓವರ್ ಗಳಲ್ಲಿ 87 ರನ್ ಗಳು ಗಳಿಸಿತು ನಂತರ ಬ್ಯಾಟಿಂಗ ಮಾಡಿದ ಪತ್ರಕರ್ತರ (ಬಿ)ತಂಡ 65 ರನ್ ಗಳಿಸಿ ಸೋಲುಂಡಿತು.


ಈ ಸಂದರ್ಭದಲ್ಲಿ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶಿವಕುಮಾರ, ಹರೀಶ ಕುಮಾರ್,  ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೆಯ  ಕಾರ್ನಾಡ್, ಯರಗೇರ ಸಿಪಿಐ ಲಿಂಗಪ್ಪ, ಡಿಎಸ್‌ಪಿ ಪರಮಾನಂದ ಘೋಡ್ಕೆ, ಫಸಿಯುದ್ದೀನ್, ಸದರ್ ಬಜಾರ್ ಸಿಪಿಐ ಉಮೇಶ ಕಾಂಬ್ಳೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ  ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್ , ರಿಪೋರ್ಟ್ ರ‍್ಸ್ ಗಿಲ್ಡ್ ನ ಪ್ರಧಾನ  ಕಾರ್ಯದರ್ಶಿ  ವಿಜಯ್ ಜಾಗಟಗಲ್ , ಭೀಮಸೇನ ಆಚಾರ್ , ಭೀಮೇಶ್ ಪೂಜಾರಿ ಸಿದ್ಧಯ್ಯ ಸ್ವಾಮಿ, ಶ್ರೀಕಾಂತ್ ಸಾವೂರು, ಜಗನ್ನಾಥ್ ಪೂಜಾರಿ, ಮಲ್ಲಿಕಾರ್ಜುನ ಸ್ವಾಮಿ, ರಾಮಕೃಷ್ಣ ದಾಸರಿ, ಅಣ್ಣಪ್ಪ ಗೌಡ ಮೇಟಿಗೌಡ, ಗುರು, ನೀಲಕಂಠ ಸ್ವಾಮಿ, ವಿಶ್ವನಾಥ್ ಹೂಗಾರ್, ಮಹಾನಂದ, ರಾಚಯ್ಯ ಸ್ವಾಮಿ  ,ಈರಣ್ಣ ಕರ್ಲಿ , ಜಯಕುಮಾರ್ ದೇಸಾಯಿ ಕಾಡ್ಲೂರು,ಅನೀಲ್, ಶಶಾಂಕ್ ಅಂಗಡಿ,  ಅಮರೇಶ್ ಸಜ್ಜನ್ , ಮಲ್ಲಪ್ಪ,  ಲಕ್ಷ್ಮಣ ಕಪಗಲ್ , ಮಹಾನಂದ, ಮುತ್ತಣ್ಣ , ಪ್ರಸನ್ನಕುಮಾರ್ ಜೈನ್, ಬಾವಾಸಲಿ, ಶಂಕರ, ರಂಗಸ್ವಾಮಿ, ಖಾಜಾಸಾಬ್, ಶ್ರೀನಿವಾಸ ಇನಾಂದಾರ್, ದುರ್ಗೇಶ,  ಖಾದರ್ , ಶ್ರೀನಿವಾಸ, ಶಿವು, ತಾಯಪ್ಪ, ಹನುಮಂತ, ಅಯ್ಯಪ್ಪ ಸ್ವಾಮಿ ಪೀಕಿಳಿಹಾಳ, ಜಿಲಾನಿ, ರವಿ, ಸೇರಿದಂತೆ ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ