ಭಕ್ತ ಶ್ರೀ ಕನಕದಾಸರ ಜಯಂತ್ಯೋತ್ಸವ- ಮ್ಯಾರಥಾನ್ ಓಟಕ್ಕೆ ಚಾಲನೆ:

ಕೀರ್ತನೆಗಳ ಮೂಲಕ ಶಾಂತಿ ಸೌಹಾರ್ದತೆ ಸಾರಿದ ಮಹಾನ್ ಸಂತ ಕನಕದಾಸರು -ರವಿ ಬೋಸರಾಜು


ರಾಯಚೂರು,ನ.18- ಜಾತಿ, ಮತ, ಪಂಥವೆಂದು ಬಡಿದಾಡದಿರಿ ಇರುದೊಂದೆ ಮಾನವಕುಲ ಎಂದು ತಮ್ಮ ಕೀರ್ತನೆಗಳ ಮೂಲಕ ನಾಡಿನಲ್ಲಿ ಶಾಂತಿ, ಸೌಹಾರ್ಧತೆ, ಸಮಾನತೆಯ ಸಂದೇಶ ಸಾರಿದ  ಮಹಾನ್ ಶ್ರೇಷ್ಟ ಸಂತ ಭಕ್ತ ಕನಕದಾಸರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು  ತಿಳಿಸಿದರು.


ನಗರದ ರೈಲ್ವೆ ನಿಲ್ದಾಣ ವೃತ್ತದಲ್ಲಿ ಹಾಲುಮತ ಸಮಾಜದ ಯುವಕರು ಭಕ್ತ ಶ್ರೀ ಕನಕದಾಸರ ಜಯಂತ್ಯೋತ್ಸವ ನಿಮಿತ್ಯ ಆಯೋಜಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಸಿರು ನಿಶಾನೆ ತೋರಿಸಿ ಸ್ಪರ್ಧಾರ್ಥಿಗಳೊಂದಿಗೆ ಹೆಜ್ಜೆಹಾಕಿ ಚಾಲನೆ ನೀಡಿ ನಂತರ ವಿಜೇತರಿಗೆ ಪ್ರಶಸ್ತಿ ನೀಡಿ ಮಾತನಾಡಿದರು.

ಮಾನವೀಯ ಮೌಲ್ಯ ಸಾರಿ ಜೀವನದುದ್ದಕ್ಕೂ ಹೋರಾಡಿದ ಸಂತ ಕನಕದಾಸರು. 15 ನೇ ಶತಮಾನದಲ್ಲಿಯೇ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಜಾತಿ ಧರ್ಮದಿಂದ ಆಚೆಗೆ ನಾವೆಲ್ಲರೂ ಮಾನವೀಯ ಮೌಲ್ಯಗಳು ಅಳವಡಿಸಿಕೊಂಡು ಸಹೋದರರಂತೆ ಬಾಳಬೇಕೆಂದು ಸಂದೇಶ ನೀಡಿದ್ದಾರೆ. ಕನಕದಾಸರು ಯಾವುದೇ ಜಾತಿಗೆ ಸೀಮಿತವಾದವರಲ್ಲ ಅವರು ನಮ್ಮೆಲ್ಲರ ದೊಡ್ಡ ಆಸ್ತಿಯಾಗಿದ್ದಾರೆ ಎಂದರು.

ಇಂತಹ ಮಹಾನ್ ನಾಯಕರ ಜಯಂತೋತ್ಸವ ದಿನದಂದು ಕ್ರೀಡೆಗೆ ಮಹತ್ವ ನೀಡಿರುವುದು ಶ್ಲಾಘನೀಯ. ಆರೋಗ್ಯಕರ ಜೀವನಕ್ಕೆ ಕ್ರೀಡೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು, ಯುವಕರು ಶಿಕ್ಷಣ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ಕೆ ಶಾಂತಪ್ಪ,  ಬಸವಂತಪ್ಪ, ರಾಮು ಗಿಲೆರಿ, ನಗರಸಭೆ ಉಪಾದ್ಯಕ್ಷರಾದ ಸಾಜಿದ್ ಸಮೀರ್, ಬಿ ರಮೇಶ್,  ನರಸಿಂಹಲು ಮಾಡಗಿರಿ, ನರಸರೆಡ್ಡಿ, ತಿಮ್ಮಾರಡ್ಡಿ, ಮರಿಸ್ವಾಮಿ, ವಿನೋದ್ ಕುಮಾರ್, ತೇಜಪ್ಪ, ರಾಜು ಪಟ್ಟಿ, ಯುಸೂಫ್ ಖಾನ್,  ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ