ವಕ್ಫ್ ಮಂಡಳಿ ಚುನಾವಣೆ ಬೆದರಿಕೆ ಆರೋಪ ಶೋಕಾಸ್ ನೋಟೀಸ್ ಜಾರಿ ರಾಯಚೂರು,ನ.18- ಕರ್ನಾಟಕ ರಾಜ್ಯ ವಕ್ಫ ಮಂಡಳಿಗೆ ಮುತವಲ್ಲಿಗಳ ಕೋಟಾದಡಿಯಲ್ಲಿ ಚುನಾವಣೆ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಒಟ್ಟು 16 ಮತದಾರರಿದ್ದು, ರಾಯಚೂರು ಜಿಲ್ಲೆಯ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮೌಲಾನಾ ಫರೀದ ಖಾನ ಅವರು ಮುತವಲ್ಲಿಗಳಿಗೆ
ದೂರವಾಣಿ ಕರೆ ಮಾಡಿ ಅನ್ವರ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಮತದಾನ ಮಾಡಬೇಕೆಂದು ಹೆದರಿಸುತ್ತಿದ್ದಾರೆ, ಇದರಿಂದ ಪಾರದರ್ಶಕ ಚುನವಾಣಾ ಉದ್ದೇಶಕ್ಕೆ ದಕ್ಕೆಯಾಗುತ್ತಿದೆ ಎಂದು ಮಾಜಿ ಸಂಸದ ದಿ.ಅಬ್ದುಲ್ ಸಮದ್ ಸಿದ್ದೀಖಿ ಇವರ ಪುತ್ರ ಹ್ಯಾರಿಸ್ ಸಿದ್ದೀಖಿ ಇವರು ಚುನಾವಣಾಧಿಕಾರಿ ಆದಿತ್ಯ ಆಮ್ಲಾನ ಬಿಸ್ವಾಸ ರವರಿಗೆ ದೂರು ನೀಡಿದ್ದರು.
ಈಗ ಚುನಾವಣಾಧಿಕಾರಿಗಳು ಇಬ್ಬರು ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ, ಇಲ್ಲದಿದ್ದಲ್ಲಿ ನಿಯಮದಂತೆ ಕ್ರಮ ಜರುಗಿಸುವದಾಗಿ ಸೂಚಿಸಿದ್ದಾರೆ.
Comments
Post a Comment