ನ.24 ರಂದು ಮಹಾಂತಶ್ರೀ ಪ್ರಶಸ್ತಿ ಸುಮಾರಂಭ ಹಾಗೂ ಜಾನಪದ ಸಂಭ್ರಮ: ಮಾಜಿ ಸಚಿವೆ ಡಾ.ಲೀಲಾ ದೇವಿ ಆರ್.ಪ್ರಸಾದರವರಿಗೆ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿ- ಶರಣಪ್ಪ ಗೋನಾಳ್. ರಾಯಚೂರು,ಜಯಧ್ವಜ ನ್ಯೂಸ್, ನ.21- ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ಹದಿನೈದನೇಯ ವಾರ್ಷಿಕೋತ್ಸವ ಅಂಗವಾಗಿ ಮಹಾಂತಶ್ರೀ ಪ್ರಶಸ್ತಿ ಸುಮಾರಂಭ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಾ ಸುಗಮ ಸಂಗೀತ ಸಂಸ್ಥೆ ಅಧ್ಯಕ್ಷರಾದ ಡಾ. ಶರಣಪ್ಪ ಗೋನಾಳ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ ಇಲಕಲ್ ನ ಶ್ರೀ ಗುರು ಮಹಾಂತ ಸ್ವಾಮಿಗಳು, ಚೌಕಿ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ನಗರ ಶಾಸಕರಾದ ಡಾ.ಶಿವರಾಜ ಪಾಟೀಲ್ ವಹಿಸಲಿದ್ದು, ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪೂರ್, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಮುಖಂಡರಾದ ಕೆ.ಶಾಂತಪ್ಪ, ರವೀಂದ್ರ ಜಲ್ದಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ಬಾರಿಯ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿಯನ್ನು ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ರವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು. ಮಹಾಂತ ಕಾಯಕ ಯೋಗಿ ಪ್ರಶಸ್ತಿಯನ್ನು, ಕಟ್ಟಿ ಬಸವಲಿಂಗೇಶ್ವರ ಜಾನಪದ ಕಲಾ ಸಂಘ ಕೊಪ್ಪಳದ ಅಧ್ಯಕ್ಷ ಶರಣಯ್ಯ ನೂರಂದಯ್ಯ ಇಟಗಿ ರವರಿಗೆ ನೀಡಲಾಗುತ್ತಿದೆ ಎಂದರು. ಗುರು ರಕ್ಷೆ ಪ್ರಶಸ್ತಿಯನ್ನು ಮದರಕಲ್ ಶಶಿಕಲಾ ಪರ್ವತಗೌಡ ರವರಿಗೆ ರವರಿಗೆ ನೀಡಲಾಗುತ್ತಿದೆ ಎಂದರು. ಇದೆ ಸಂದರ್ಭದಲ್ಲಿ ಆದರ್ಶ ದಂಪತಿ ಪ್ರಶಸ್ತಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಮಹಾಂತ ಪ್ರಶಸ್ತಿ, ಮಹಾಂತ ಪುರಸ್ಕಾರ ಪ್ರಶಸ್ತಿ, ಅತ್ಯುತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ, ಅತ್ಯುತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಸಂಜೆ 6.30ಕ್ಕೆ ನಡೆಯುವ ಜಾನಪದ ಸಂಭ್ರಮ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮದ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಶ್ರೀ ಗಳು ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ನೆರವೇರಿಸಲಿದ್ದಾರೆ ಎಂದ ಅವರು ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜ್ಯೂ. ರಾಜಕುಮಾರ್, ಜ್ಯೂ. ಪುನೀತ್ ರಾಜಕುಮಾರ್,ಜ್ಯೂ . ವಿಷ್ಣುವರ್ಧನ್ ಮತ್ತು ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರತಿಭಾ ಗೋನಾಳ, ಸಿದ್ದಯ್ಯ ಸ್ವಾಮಿ ಇತರರು ಇದ್ದರು.
Comments
Post a Comment