ಮಣಿಪುರ ಹಿಂಸಾಚಾರ: ರಾಷ್ಟ್ರಪತಿಗಳ ಮಧ್ಯೆ ಪ್ರವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಮನವಿ. ರಾಯಚೂರು,ನ.19- ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಎಲ್ಲೆ ಮೀರಿದ್ದು ಸಂವಿಧಾನದ ಮತ್ತು ಭಾರತೀಯ ನಾಗರೀಕರ ರಕ್ಷಕರಾಗಿರುವ ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಮಧ್ಯ ಪ್ರವೇಶಿಸಲು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆರವರು ಮನವಿ ಮಾಡಿದ್ದಾರೆ.
ಕಳೆದ 18 ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು ಕೇಂದ್ರ ಸರ್ಕಾರ ಅದನ್ನು ಹತ್ತಿಕ್ಕಲು ಆಗುತ್ತಿಲ್ಲ ಅಲ್ಲಿಯ ಜನರು ಅಸುರಕ್ಷಿತವಾಗಿದ್ದಾರೆ ನಮ್ಮ ನೆಲದಲ್ಲೆ ನಮಗೆ ಭಯದ ವಾತಾವಾರಣದಲ್ಲಿ ಜೀವಿಸುವ ಸನ್ನಿವೇಶ ದುರದೃಷ್ಟಕರವೆಂದು ತಿಳಿಸಿರುವ ಅವರು ಕೂಡಲೆ ಮಣಿಪುರದಲ್ಲಿ ಶಾಂತಿ ನೆಲೆಸಲು ತಾವು ಮತ್ತು ರಾಷ್ಟ್ರಪತಿಗಳ ಕಛೇರಿ ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
Comments
Post a Comment