ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ  ಗೊ.ರು ಚೆನ್ನಬಸಪ್ಪ  :         
ಶ್ರುತಿ ಸಾಹಿತ್ಯ ಮೇಳ ಸಂತಸ

  ರಾಯಚೂರು,ನ.21- ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಸರ್ವಾಧ್ಯಕ್ಷರನ್ನಾಗಿ 94 ವರ್ಷದ  ನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಗೋ. ರು. ಚನ್ನಬಸಪ್ಪ ಅವರ ಆಯ್ಕೆ ಮಾಡಿದ್ದಕ್ಕಾಗಿ ರಾಯಚೂರು ನಗರದ ಸಾಹಿತಿಕ, ಸಾಂಸ್ಕೃತಿಕ ಸಂಘಟನೆಯಾದ ಶೃತಿ ಸಾಹಿತ್ಯ ಮೇಳ  ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ. 

  1997- 98 ರಲ್ಲಿ ಶ್ರುತಿ ಸಾಹಿತ್ಯ ಮೇಳ ದಿಂದ  ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ

ಗೋ. ರು. ಚ.  ಭಾಗವಹಿಸಿ ಜಾನಪದ ಪ್ರಸ್ತುತ ಬಗ್ಗೆ ಸುದೀರ್ಘವಾಗಿ ಉಪನ್ಯಾಸವನ್ನು ನೀಡಿ  ಸಭಿಕರಿಂದ ಮೆಚ್ಚುಗೆ ಪಡೆದಿದ್ದರು. ಅಂದು ಶ್ರುತಿ ಸಾಹಿತ್ಯ ಮೇಳದಿಂದ *ಸಾಹಿತ್ಯ ಭೀಷ್ಮ* ಎಂಬ ಬಿರುದನ್ನು ನೀಡಿ 

ಅಭಿನಂದಿಸಿ ಗೌರವಿಸಲಾಗಿತ್ತು. 

   ಗೊ.ರು.ಚ.ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಒಬ್ಬ ಕನ್ನಡಿಗ ಒಂದು ರೂಪಾಯಿ ಯೋಜನೆಗೆ ಶ್ರುತಿ ಸಾಹಿತ್ಯ ಮೇಳ  ಭಾಗವಹಿಸಿ ಯೋಜನೆಯ ಯಶಸ್ವಿಗೆ ಶ್ರಮಿಸಲಾಗಿತ್ತು. 

    ಕನ್ನಡ ಸಾಹಿತ್ಯಕ್ಕೆ ಮತ್ತು ಜಾನಪದ ಕ್ಷೇತ್ರಕ್ಕ ಅದ್ವೀತೀಯ ಕೊಡುಗೆ ನೀಡಿರುವ ಗೊ.ರು. ಚನ್ನಬಸಪ್ಪ ಅವರು ನಾಡು ಕಂಡ ಅಪ್ರತಿಮ ವಿದ್ವಾಂಸರಾಗಿದ್ದಾರೆ ಇವರ ಆಯ್ಕೆಯು ತುಂಬಾ ಸೂಕ್ತವಾಗಿದೆ ಎಂದು ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ, ಉಪಾಧ್ಯಕ್ಷರಾದ ಡಾ. ರಾಯಚೂರು ಶೇಷಗಿರಿ ದಾಸ್, ಕಾರ್ಯದರ್ಶಿಯಾದ ರಮೇಶ್ ಕುಲಕರ್ಣಿ, ಜೆ. ಎಂ. ವೀರೇಶ್, ಹಿರಿಯ ಸದಸ್ಯರುಗಳಾದ  ರಮಾಕಾಂತ್ ಕುಲಕರ್ಣಿ, ನರಸಿಂಹ ಮೂರ್ತಿ ಕುಲಕರ್ಣಿ, ಸುರೇಶ್ ಕಲ್ಲೂರ್, ವಸುದೇಂದ್ರ ಸಿರವಾರ, ರವೀಂದ್ರ ಕುಲಕರ್ಣಿ ಮುಂತಾದವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ