ಬಸವ ಕೇಂದ್ರ ಮತ್ತು ಲೋಹಿಯಾ ಪ್ರತಿಷ್ಠಾನದಿಂದ ನ.23 ರಂದು ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ- ಅಮೀನಗಡ. ರಾಯಚೂರು, ಜಯಧ್ವಜ ನ್ಯೂಸ್ , ನ.21- ಬಸವ ಕೇಂದ್ರ ಮತ್ತು ಲೋಹಿಯಾ ಪ್ರತಿಷ್ಠಾನದಿಂದ ನ.23 ರಂದು ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕರಾದ ಗಣೇಶ ಅಮೀನಗಡ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6ಕ್ಕೆ ನಗರದ ಐಎಂಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಂಬಳಿ ನಾಗಿದೇವ ಮತ್ತು ಬೆಳಗು ಕೃತಿಗಳ ಲೋಕಾರ್ಪಣೆಯನ್ನು ಹಿರಿಯ ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಮಾಡಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿ ವಹಿಸಲಿದ್ದು, ಅತಿಥಿಗಳಾಗಿ ಸಾಹಿತಿಗಳಾದ ಅಯಪ್ಪಯ್ಯ ಹುಡಾ, ಆಂಜಿನೇಯ ಜಾಲಿಬೆಂಚಿ,ಗಣೇಶ ಅಮೀನಗಡ ಆಗಮಿಸಲಿದ್ದಾರೆ ಎಂದರು. ಪುಸ್ತಕ ಪರಿಚಯವನ್ನು ಡಾ.ಸರ್ವಮಂಗಳ ಸಕ್ರಿ ಮಾಡಲಿದ್ದು ಕಾರ್ಯಕ್ರಮದಲ್ಲಿ ಲೇಖಕರಾದ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ರಾಚನಗೌಡ, ಎಂ.ರಂಗಪ್ಪ, ಕೆ.ಗಿರಿಜಾ ರಾಜಶೇಖರ ಭಾಗವಹಿಸಲಿದ್ದಾರೆ ಎಂದರು. ಇದೆ ವೇಳೆ ಗಣೇಶ ಅಮೀನಗಡ ನಿರ್ದೇಶನದ ಕೌದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಭೀಮನಗೌಡ ಇಟಗಿ, ವೀರುಪಾಕ್ಷಪ್ಪ ಇದ್ದರು.
Comments
Post a Comment