ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ರಾಯಚೂರು ದಿಗ್ವಿಜಯ ಕಾರ್ಯಕ್ರಮ ಉಧ್ಘಾಟನೆ:  ಭಗವಂತನನ್ನು ಸ್ಮರಿಸಿದರೆ ಕಷ್ಟಗಳು ನಿವಾರಣೆ- ಶ್ರೀಗಳು.                    ರಾಯಚೂರು, ಜಯಧ್ವಜ ನ್ಯೂಸ್ , ನ.21- ಭಗವಂತನನ್ನು ನಿಷ್ಕಲ್ಮಷವಾಗಿ ಸ್ಮರಿಸಿದರೆ ನಮ್ಮ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು. ಅವರಿಂದು ನಗರದ ಕರ್ನಾಟಕ ಸಂಘ ಅವರಣದಲ್ಲಿ ಶ್ರೀ ಸತ್ಯಾತ್ಮತೀರ್ಥರ ರಾಯಚೂರು ದಿಗ್ವಿಜಯ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಭಗವಂತನ ಶಕ್ತಿ ಅಗಾಧವಾಗಿದೆ ನಮ್ಮೆಲ್ಲರಿಗೂ ಆತನೆ ಚಲನಾಶಕ್ತಿಯಾಗಿದ್ದಾನೆ ದೇವರ ಸಂಕಲ್ಪವಿಲ್ಲದಿದ್ದರೆ ಯಾವುದೆ ಕಾರ್ಯವಾಗುವುದಿಲ್ಲವೆಂಬ ಅಚಲ ವಿಶ್ವಾಸ ನಮ್ಮದಾಗಬೇಕು ನಮ್ಮ ಸತ್ಕರ್ಮ ಮತ್ತು ಧರ್ಮಾಚರಣೆ ನಮಗೆ ಸನ್ಮಾರ್ಗದಲ್ಲಿ ನಡೆಸುತ್ತಿದೆ ನಾವು ಹಾದಿ ತಪ್ಪದಂತೆ ದೇವರ ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು. ರಾಯಚೂರು ಜನರು ಭಗವಧ್ಭಕ್ತರು ಮೇಲಿಂದ ಮೇಲೆ ಸಾಧು ಸಂತರು, ಸನ್ಯಾಸಿಗಳು, ಸತ್ಪುರುಷರ ಕಾರ್ಯಕ್ರಮ ಆಯೋಜಿಸುತ್ತಿರುತ್ತೀರಿ ಇಲ್ಲಿ ಅನೇಕ ದಾಸರು, ಯತಿವರೇಣ್ಯರು ನಡೆದಾಡಿದ ಪಾವನ ಭೂಮಿಯಾಗಿದೆ ಎಂದರು.   

ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕೃತಾರ್ಥರ್ಗಬೇಕೆಂದರು. ಪ್ರಾರಂಭದಲ್ಲಿ ಹನುಮಾನ್ ಟಾಕೀಸ್ ವೃತ್ತದ ಬಳಿ ಶ್ರೀಪಾದಂಗಳವರನ್ನು ಭವ್ಯವಾಗಿ

ಸ್ವಾಗತಿಸಲಾಯಿತು, ದೀಪ ಹಿಡಿದು ಮಹಿಳೆಯರು ಸಾಗಿದರು, ಭಜನಾ ತಂಡಗಳು ಭಾಗವಹಿಸಿದ್ದವು, ಸಿಡಿ ಮದ್ದು ಬಾನಲ್ಲಿ ಚಿತ್ತಾರ ಮೂಡಿಸಿ ಮೆರಗು ತಂದಿತು. ಅಪಾರ ಸಂಖ್ಯೆಯಲ್ಲಿ ಭಗವಧ್ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ