ವಕ್ಫ್ ಮಂಡಳಿ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ. ರಾಯಚೂರು, ಜಯಧ್ವಜ, ನ್ಯೂಸ್, ನ.22- ರಾಜ್ಯದಲ್ಲಿ ರೈತರ ಜಮೀನುಗಳನ್ನು ಸರ್ಕಾರ ವಕ್ಫ್ ಮೂಲಕ ಕಬಳಿಕೆ ಮಾಡುತ್ತಿದೆ ಎಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿ ರೈತರ ಹೆಸರಲ್ಲಿರುವ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರು ನಮೂದಿಸಲಾಗುತ್ತಿದ್ದು ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರಿವುದರಿಂದ ರಾಜ್ಯ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರು ಜಮೀನು ಕಬಳಿಸುವ ಹುನ್ನಾರ ಮಾಡಿದೆ ಎಂದು ದೂರಿದ ಪ್ರತಿಭಟನಾ ನಿರತರು ರಾಜ್ಯ ಸರ್ಕಾರ ಯಥಾಸ್ಥಿತಿಯಲ್ಲಿ ರೈತರ ಹೆಸರು ಮರು ಸೇರ್ಪಡೆ ಮಾಡಬೇಕು ಅಲ್ಲದೆ ಇಲ್ಲ ಸಲ್ಲದ ಕ್ರಮ ಅನುಸರಿಸಿದರೆ ಬಿಜೆಪಿ ಪಕ್ಷ ರೈತರೊಂದಿಗೆ ಬೀದಿಗಿಳಿದು ಹೋರಾಡಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಶಿವಬಸಪ್ಪ ಮಾಲಿಪಾಟೀಲ್, ರಾಜಕುಮಾರ್, ಕೆ.ಎಂ.ಪಾಟೀಲ್, ಜಿ.ಶಂಕರರೆಡ್ಡಿ, ವೈ.ಗೋಪಾಲರೆಡ್ಡಿ, ಬಿ.ಗೋವಿಂದ,ಉಟ್ಕೂರು ರಾಘವೇಂದ್ರ, ಡಾ.ನಾಗರಾಜ ಬಾಲ್ಕಿ,ವಿನಾಯಕ ರಾವ್, ನರಸರೆಡ್ಡಿ, ವಿಜಯಕುಮಾರ್ ಸಜ್ಜನ್, ಶಿವಕುಮಾರ್, ಪಲಗುಲ ನಾಗರಾಜ್, ರಾಮಚಂದ್ರ ಕಡಗೋಲು, ಶರಣಮ್ಮ ಕಾಮರೆಡ್ಡಿ,ಸುಮಾ ಗಸ್ತಿ,ಸುಶೀಲಾ, ನಾಗವೇಣಿ ಸಾಹುಕಾರ್ ಸೇರಿದಂತೆ ಅನೇಕರು ಇದ್ದರು.
Comments
Post a Comment