ಪಿಡಿಓ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿ - ರಝಾಕ್ ಉಸ್ತಾದ್. ರಾಯಚೂರು, ಜಯಧ್ವಜ ನ್ಯೂಸ್, ನ.21- ಸಿಂಧನೂರಿನಲ್ಲಿ ನಡೆದಿರುವ ಪಿಡಿಓ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಝಾಕ್ ಉಸ್ತಾದ್ ಆಗ್ರಹಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿಡಿಓ ಹುದ್ದೆಗೆ ನಡೆದ ಪರೀಕ್ಷೆ ವೇಳೆ ಪರೀಕ್ಷಾ ಮೇಲ್ವಿಚಾರಣೆ ಲೋಪ ಕಾರಣದಿಂದ ಹರಿದ ಲಕೋಟೆಯಿಂದ ಪ್ರಶ್ನೆ ಪತ್ರಿಕೆ ನೀಡಿದ್ದನ್ನು ಕೆಲ ವಿದ್ಯಾರ್ಥಿಗಳು ಪ್ರಶ್ನಿಸಿ ದಾಂಧಲೆ ಮಾಡಿದ್ದಾರೆ ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ ಪ್ರಮುಖವಾಗಿ ಇದರಲ್ಲಿ ತಪ್ಪಿತಸ್ಥ ರಾದವರ ಮೇಲೆ ಯಾವುದೆ ಕ್ರಮವಾಗಿಲ್ಲವೆಂದು ದೂರಿದ ಅವರು ಇದೆಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಸತ್ಯಾಂಶ ಬಯಲಿಗೆ ಬರಬೇಕೆಂದರೆ ಸರ್ಕಾರ ಇಡಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದರು. ಅಕ್ರಮದ ಬಗ್ಗೆ ಧ್ವನಿಯೆತ್ತಿದವರ ಮೇಲೆಯೇ ಪ್ರಕರಣ ದಾಖಲಿಸಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಉಸ್ಮಾನ್ ಇದ್ದರು.
Comments
Post a Comment