ಶಾಮ್ ಸುಂದರ್ ಗುರು ಸ್ವಾಮಿ ರವರಿಂದ ಶಬರಿಮಲೆಗೆ 27ನೇ  ವರ್ಷದ  ಮಹಾಪಾದಯಾತ್ರೆ  .       ಜಯಧ್ವಜ ನ್ಯೂಸ್ ರಾಯಚೂರು, ಡಿ.17-                                         ಪ್ರತಿ ವರ್ಷದಂತೆ ಈ ವರ್ಷವು ರಾಯಚೂರಿನಿಂದ ಶಬರಿಮಲೆಗೆ ಮಹಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಕಳೆದ 27 ವರ್ಷದಿಂದ ಸತತವಾಗಿ ಪಾದಯಾತ್ರೆ ನಡೆಸುತ್ತಿರುವುದು ಶಾಮಸುಂದರ ಗುರುಸ್ವಾಮಿ ಸ್ವಾಮಿಯೊಂದಿಗೆ 40 ಅಯ್ಯಪ್ಪಸ್ವಾಮಿ ಮಾಲಾಧಾರಿ ಸ್ವಾಮಿಗಳು ಹೊರಟಿದ್ದಾರೆ. ಸುಮಾರು 30 ದಿನಗಳ ಕಾಲ ಯಾತ್ರೆ ಇರುತ್ತದೆ ಆದೋನಿ, ಪತ್ತಿಕೊಂಡ ಗುತ್ತಿ ,ಅನಂತಪುರ, ಪೆನಕೊಂಡ ಚಿಕ್ಕಬಳ್ಳಾಪುರ, ದೇವನಹಳ್ಳಿ ವೈಟಫೀಲ್ಡ್, ಸರ್ಜಾಪುರ ಹೊಸೂರು (ತಮಿಳನಾಡು ) ಧರ್ಮಪುರಿ ತಪ್ಪುರು ಘಟ್ಟ ತರಾ ಮಂಗಲಮ್ ತೀರಚನಗೂಢ ಪರಮಾತೀವಿಲರು ಕರೂರು ಧಿಂಡ್ದಗಾಲ ಥೇನಿ ಕುಂಬ್ಳಿ (ಕೇರಳ) ವೇಡಿ ಪರಿಯರ್  ಸತ್ರಮ್ ಪುಲಿಮೆಡು  ರಸ್ತೆ  ಮಾರ್ಗವಾಗಿ ಶಬರಿಮಲೆ ತಲಪುತ್ತಾರೆ.  ಈ ಸಂದರ್ಭದಲ್ಲಿ ಶಾಮ್ ಗುರುಸ್ವಾಮಿ ಮಾತನಾಡಿ ಈ ವರ್ಷ ವಿಶೇಷವಾಗಿದ್ದು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ 40 ಸ್ವಾಮಿಗಳಯೊಂದಿಗೆ ಪಾದಯಾತ್ರೆಯನ್ನು ಮಾಡವುದು ಅಯ್ಯಪ್ಪ ಅಶೀರ್ವಾವಾದದಿಂದ ಪ್ರಯಾಣವು ಯಶಸ್ವಿ ಯಾಗಲೆಂದು  ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಶಂಭು ಗುರುಸ್ವಾಮಿ ದೇವದುರ್ಗ ಬೆಲ್ಲಮ್ ಸುನಿಲ್ ಸ್ವಾಮಿ, ಮುನಿ ಸ್ವಾಮಿ ಚಂದ್ರು ಸ್ವಾಮಿ ಯರಮರಸ್, ಪ್ರವೀಣ ಸ್ವಾಮಿ, ಚನ್ನಪ್ಪ ಸ್ವಾಮಿ, ನಾಗರಾಜ್ ಸ್ವಾಮಿ, ಸುರೇಶ ಸ್ವಾಮಿ, ಶಾಖವಾದಿ ಅಮರೇಶ ಸ್ವಾಮಿ, ರಘು ಸ್ವಾಮಿ, ಪವನ ಸ್ವಾಮಿ ಇನ್ನಿತರ  ಸ್ವಾಮಿಗಳು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ