ಜೋಡು ವೀರಾಂಜನೇಯ ದೇವಸ್ಥಾನದ 32ನೇ ವಾರ್ಷಿಕೋತ್ಸವ ಅಂಗವಾಗಿ ಮಹಾರಥೋತ್ಸವ                 ಜಯ ಧ್ವಜ ನ್ಯೂಸ್ ರಾಯಚೂರು ಡಿ.10-                                            ನಗರದ ಶ್ರೀ ಜೋಡು ವೀರಾಂಜನೇಯ ದೇವಸ್ಥಾನ ದ 32ನೆಯ ವಾರ್ಷಿಕೋತ್ಸವ ದ ನಿಮಿತ್ಯ ಮಹಾ ರಥೋತ್ಸವ ಹಾಗೂ ತೊಟ್ಟಿಲು ಸೇವೆ ಸಡಗರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ವಿಶೇಷ ಅರ್ಚನೆ,ಅಭಿಷೇಕ, ರಜತ ಕವಚ, ಪುಷ್ಪಾಲಂಕಾರ, ಪವಮಾನ ಹೋಮ, ಮಹಾ ಮಂಗಳಾರತಿ ನಡೆದವು.
ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು .

ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ ಅಧ್ಯಕ್ಷರಾದ ದಾನಪ್ಪ ಯಾದವ,ಅರ್ಚಕರಾದ ಸುಶೀಲೇಂದ್ರ ಆಚಾರ,ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ ,   ಕಾರ್ಯಾಧ್ಯಕ್ಷರಾದ ವೇಣುಗೋಪಾಲ ಆಚಾರ ಇನಾಂದಾರ್,ಉಪಾಧ್ಯಕ್ಷರಾದ ಡಾ. ಪ್ರಮೋದ್ ಕುಮಾರ್,ಕಡಗೋಲು ಆಂಜನೇಯ,ಸಾವಿತ್ರಿ ಪುರುಷೋತ್ತಮ, ಶಶಿಭೂಷಣ,ಎನ್.ಶಂಕ್ರಪ್ಪ ವಕೀಲರು,ಅರ್ಚಕರಾದ ಸುಶೀಲೇಂದ್ರ ಆಚಾರ ಇನಾಮದಾರ  ,ನರಸಿಂಗರಾವ್ ದೇಶಪಾಂಡೆ, ಅಶೋಕ್ ನಾಯಕ,ವೆಂಕಟೇಶ ನವಲಿ, ಪ್ರಸನ್ನ ಆಲಂಪಲ್ಲಿ, ಸುರೇಶ್ ಕಲ್ಲೂರು,  ಶ್ರೀನಿವಾಸ್

ಶೆಟ್ಟಿ,ಈರಣ್ಣ, ವಿಷ್ಣುತೀರ್ಥ ಸಿರವಾರ, ಪಾಂಡುರಂಗ ರಾವ್, ಮದನಮೋಹನ್, ಗುರುರಾಜ ಕುಲಕರ್ಣಿ, ಕಿರಣಕುಮಾರ, ಸಿದ್ದೇಶ್ ಯಲ್ಕುರು, ಪ್ರಹ್ಲಾದ ಕುಲಕರ್ಣಿ,ಸುಶಿಲೇಂದ್ರ ಕುಲಕರ್ಣಿ,ರಂಗಾಚಾರ್, ಅಮರಗುಂಡಪ್ಪ ಸೇರಿದಂತೆ ಮಹಿಳಾ ಭಜನಾ ಮಂಡಳಿಗಳು ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ