ಕಾಡ್ಲೂರಲ್ಲಿ ಡಿ.13 ರಿಂದ 15 ರವರೆಗೆ ಶ್ರೀ ಹನುಮದವ್ರತ ಕಾರ್ಯಕ್ರಮ :
ಡಿ.14 ರಂದು ಶ್ರೀ ನಿರ್ಭಯಾನಂದ ಸ್ವಾಮಿಗಳಿಂದ ಆಶೀರ್ವಚನ ಹಾಗೂ ಡಾ.ಮುದ್ದುಮೋಹನರವರಿಂದ ಸಂಗೀತ
ರಾಯಚೂರು,ಡಿ.12- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಮತ್ತು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಹಾಗೂ ಸ್ವಯಂಭೂ ರುದ್ರದೇವರ ಸನ್ನಿದಾನದಲ್ಲಿ ಡಿ.13 ರಿಂದು 15ರವರೆಗೆ ಹನುಮದ ವ್ರತ ಕಾರ್ಯಕ್ರಮ ಜರುಗಲಿದೆ.
ಡಿ.13 ರಂದು ಶ್ರೀ ಹನುಮದ ವ್ರತ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ದೇವರಿಗೆ ಅಲಂಕಾರ, ಅಭಿಷೇಕ, ಲಕ್ಷ ತುಳಸಿ ,ಪುಷ್ಪಾರ್ಚನೆ ,ಹನುಮದವೃತ ಕಥೆ, ವಿಶೇಷ ಪೂಜೆ, ತೀರ್ಥಪ್ರಸಾದ ವಿನಿಯೋಗ ನೆರವೇರಲಿದೆ.
ಡಿ.14 ರಂದು ರಂದು ಬೆಳಿಗ್ಗೆ ವಾಯುಸ್ತುತಿ, ರಾಯರ ಅಷ್ಟೋತ್ತರ, ಅಭೀಷೇಕ, ಶ್ರೀ ಪ್ರಾಣದೇವರಿಗೆ ನವನೀತ ಅಲಂಕಾರ, ವಿಜಯಾಚಾರ್ ದಿಗ್ಗಾವಿಯವರಿಂದ ಕಾಡ್ಲೂರು ಸಂಸ್ಥಾನ ಪ್ರತಿಮೆಗಳ ಪೂಜೆ, ನಂತರ 11 ಗಂಟೆಗೆ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿಗಳಿಂದ ಆಶೀರ್ವಚನ, ತುಲಾಭಾರ, ಸಾಧಕರಿಗೆ ಕಾಡ್ಲೂರು ಸಂಸ್ಥಾನ ಗೌರವ ಪುರಸ್ಕಾರ, ನಂತರ ಸರ್ವರಿಗೂ ತೀರ್ಥ ಪ್ರಸಾದ ವಿತರಣೆ ಸಾಯಿಂಕಾಲ ೪ಗಂಟೆಗೆ ಕಾಡ್ಲೂರು ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಗಳ ಸಂವಾದ ಕಾರ್ಯಕ್ರಮ ನಂತರ ೫.೩೦ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಿಂದುಸ್ಥಾನಿ ಶಾಸ್ತಿçÃಯ ಸಂಗೀತ ಗಾಯಕರಾದ ಡಾ.ಮುದ್ದುಮೋಹನರವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ ೭ ಗಂಟಗೆ ಕೃಷ್ಣಾ ನದಿ ಆರತಿ, ದೀಪೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲದೆ.
ಡಿ.15 ರಂದು ಹುಣ್ಣಿಮೆ ಪ್ರಯುಕ್ತ ಬೆಳಿಗ್ಗೆ ಶ್ರೀ ರಾಮದೇವರಿಗೆ ,ಶ್ರೀ ಪ್ರಾಣ ದೇವರಿಗೆ, ರುದ್ರ ದೇವರಿಗೆ ಅಭೀಷೇಕ, ಅಲಂಕಾರ, ಮಹಾಮಂಗಳಾರತಿ, ದಾಮೋಧರ್ ಆಚಾರ್ ಪುರೋಹಿತರವರಿಂದ ಸತ್ಯನಾರಾಯಣ ಪೂಜೆ , ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾಡ್ಲೂರು ಸಂಸ್ಥಾನದ ರಂಗರಾವ ದೇಸಾಯಿ, ಜಯಕುಮಾರ್ ದೇಸಾಯಿ, ವಿಜಯಕುಮಾರ್ ದೇಸಾಯಿ ಮತ್ತು ಕಾಡ್ಲೂರು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.
Comments
Post a Comment