ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ: ಶ್ರೀ ಪ್ರಾಣದೇವರಿಗೆ ಬೆಣ್ಣೆ ಅಲಂಕಾರ ರಾಯಚೂರು ,ಡಿ.13- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ
ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಮತ್ತು ಸ್ವಯಂಭೂ ರುದ್ರ ದೇವರ ಸನ್ನಿಧಾನದಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ಸುಪ್ರಬಾತ, ಧ್ವಜಾರೋಹಣ, ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಹನುಮದವ್ರತ ಕಥೆ, ಪ್ರಾಣ ದೇವರಿಗೆ ನವನೀತ(ಬೆಣ್ಣೆ ಅಲಂಕಾರ) ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ,
ಶ್ರೀಧರ್ ಕುಲಕರ್ಣಿಯವರಿಂದ ದಾಸವಾಣಿ ನೆರವೇರಿತು ವಿರೇಂದ್ರ ಕುರ್ಡಿ ಹಾರ್ಮೋನಿಯಮ್ ಸಾಥ್ ನೀಡಿದರು. ರಾತ್ರಿ ಭಜನೆ, ಪಲ್ಲಕ್ಕಿ ಉತ್ಸವ ,ದೀಪೋತ್ಸವ, ತೆಪ್ಪೋತ್ಸವ , ಕೃಷ್ಣಾನದಿ ಆರತಿ ನೆರವೇರಿದವು .
ಈ ಸಂದರ್ಭದಲ್ಲಿ ರಂಗರಾವ್ ದೇಸಾಯಿ, ಜಯಕುಮಾರ್ ದೇಸಾಯಿ, ವಿಜಯ್ ಕುಮಾರ್, ದಾಮೋದರ ಆಚಾರ್ ಪುರೋಹಿತ, ವಾಸುದೇವ ಆಚಾರ ಕಲ್ಯಾಣಿ, ಅಭಿಷೇಕ, ಕೃಷ್ಣಾಚಾರ ಸಂಗಮ, ಪ್ರಹ್ಲಾದ ಆಚಾರ ಜೋಷಿ, ನಾರಾಯಣಾಚಾರ ಕೊಪ್ಪರ, ಕೃಷ್ಣಾಚಾರ ಜೋಷಿ, ಎಇಇ ರವಿ , ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ,ಅನಿತಾ ಕೊಪ್ಪರ, ರಾಧಾ, ಲಹರಿ, ಲಕ್ಷ್ಮಿ ಸೇರಿದಂತೆ ಅನೇಕರಿದ್ದರು .
Comments
Post a Comment