ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ:                  ವಿದ್ಯಾರ್ಥಿಗಳಲ್ಲಿ ಗುರು ಭಕ್ತಿ ಮುಖ್ಯ- ಶ್ರೀ ನಿರ್ಭಯಾನಂದ ಸ್ವಾಮೀಜಿ                                                                                     ಜಯ ಧ್ವಜ ನ್ಯೂಸ್       ರಾಯಚೂರು,ಡಿ.15- ವಿದ್ಯಾರ್ಥಿಗಳಲ್ಲಿ ಗುರು ಭಕ್ತಿ ಮುಖ್ಯವೆಂದು ವಿಜಯಪುರ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಶ್ರೀಗಳು ನುಡಿದರು.   

                         ಅವರು ಶನಿವಾರ ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಮತ್ತು ಸ್ವಯಂಭೂ ರುದ್ರ ದೇವರ ಸನ್ನಿಧಾನದಲ್ಲಿ ಹನುಮದ ವ್ರತ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ  ಲಕ್ಷ ಪುಷ್ಪಾರ್ಚನೆ ನೆರವೇರಿಸಿ ಕಾಡ್ಲೂರು ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಆಶೀರ್ವಚನ ನೀಡಿದರು.

ಇಂದಿನ ಯುವಕರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕೆಂದ ಅವರು ವಿದ್ಯಾರ್ಥಿಗಳು ಗುರುಭಕ್ತಿ ಬೆಳೆಸಿಕೊಳ್ಳಬೇಕೆಂದು. 

        ಶಿಕ್ಷಕರು ದೇವರ ಸಮಾನರು ಮಹಾಭಾರತದಲ್ಲಿ ಅರ್ಜುನ ಮತ್ತು  ಕರ್ಣ ಇಬ್ಬರು ಅಪಾರ ಶಕ್ತಿಶಾಲಿ ಧನುರ್ಧಾರಿಗಳು ಆದರೆ ಅರ್ಜುನನಿಗೆ ಗುರುವಿನ ಆಶೀರ್ವಾದವಿದ್ದರೆ ಕರ್ಣನಿಗೆ ಗುರುವಿನ ಶಾಪವಿದ್ದ ಕಾರಣ ಆತ ಕೌರವರ ಪಕ್ಷ ಸೇರಿ ಯುದ್ಧದಲ್ಲಿ ಮರಣವನ್ನಪ್ಪಿದನು ಎಂದರು. ನೋಬೆಲ್ ಪ್ರಶಸ್ತಿ ಪಡೆದ ಕ್ಯೂರಿ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ನಿರಂತರ ಶ್ರಮ ಮತ್ತು ಅಭ್ಯಾಸದಿಂದ ಜಗದ್ವಿಖ್ಯಾತಿ ಪಡೆದರು ಎಂದರು. 

  ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕೆಂದರು.            ನಿವೃತ್ತ ಐಎಎಸ್ ಅಧಿಕಾರಿ ಹಾಗು ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ

ಡಾ.ಮುದ್ದುಮೋಹನ ಮಾತನಾಡಿ ಇಲ್ಲಿನ ವಿದ್ಯಾರ್ಥಿಗಳ ಮುಖದಲ್ಲಿ ಕಾಂತಿಯಿದೆ ಇದಕ್ಕೆ ಮುಖ್ಯ ಕಾರಣ ಇಲ್ಲಿನ ಸುಂದರ ಪರಿಸರ ಪವಿತ್ರ ಕೃಷ್ಣಾನದಿ, ನಿಮ್ಮಲ್ಲಿ ಮುಗ್ಧ ಮನಸ್ಸಿದೆ ನೀವು ಅಬ್ದುಲ್ ಕಲಾಂ ರಂತಹ ಉನ್ನತ ವ್ಯಕ್ತಿಗಳನ್ನು ಧ್ಯೇಯವಾಗಿ  ಇಟ್ಟುಕೊಳ್ಳಬೇಕೆಂದರು .   

     ನಿವೃತ್ತ ನ್ಯಾಯಾಧೀಶ ಸತ್ಯನಾರಾಯಣ ಆಚಾರ್ ಕಾಡ್ಲೂರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪಠ್ಯಕ್ಕೆ ಸೀಮಿತವಾಗದೆ ಅನೇಕ ವಿಷಯಗಳ ಬಗ್ಗೆ ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂದು.

ರೈತ ಇಡಿ ದೇಶಕ್ಕೆ ಅನ್ನ ನೀಡುತ್ತಾನೆ ಆತ ಕೃಷಿ ಮಾಡುವುದು ನಿಲ್ಲಿಸಿದರೆ ದೇಶದಲ್ಲಿ ಧಾನ್ಯದ ಕೊರತೆ ಉಂಟಾಗುತ್ತದೆ ಆದ್ದರಿಂದ ರೈತನ ಉಪಕಾರ ಸ್ಮರಣೆ  ನಾವೆಲ್ಲರು ಸದಾ ಮಾಡಬೇಕೆಂದರು. ವೇದಿಕೆ ಮೇಲೆ ಕಾಡ್ಲೂರು ಸಂಸ್ಥಾನದ ಸುವರ್ಣಾ ಬಾಯಿ ದೇಸಾಯಿ, ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರ ಶಿವಾಳೆ ಇದ್ದರು. 

                                                  ಶ್ರೀ ನಿರ್ಭಯಾನಂದ ಸ್ವಾಮೀಜಿಗಳಿಗೆ ಶಿಕ್ಷಣ ಸಾಮಗ್ರಿಗಳಿಂದ ತುಲಾಭಾರ ಮಾಡಲಾಯಿತು.

ಡಾ.ಮುದ್ದುಮೋಹನ್, ವೆ.ಮೂ.ವಿಜಯೀಂದ್ರಾಚಾರ ದಿಗ್ಗಾವಿ, ಸತ್ಯನಾರಾಯಣ ಆಚಾರ ಕಾಡ್ಲೂರುರವರಿಗೆ ಕಾಡ್ಲೂರು ಸಂಸ್ಥಾನ ಗೌರವ ಪುರಸ್ಕಾರ ನೀಡಲಾಯಿತು.

ಇದೆ ವೇಳೆ ಕಾಡ್ಲೂರು ಸಂಸ್ಥಾನ ‌ಹೊರತಂದ 2025ನೇ ವರ್ಷದ ದಿನ ದರ್ಶಿಕೆ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಪೆನ್ನು, ನೋಟುಪುಸ್ತಕ, ಜಾಮೀಟ್ರಿ ಬಾಕ್ಸ್ ನೀಡಲಾಯಿತು. ಸಕಲರಿಗೂ ತೀರ್ಥ ಪ್ರಸಾದ ವಿತರಿಸಲಾಯಿತು.

ಪ್ರಾಸ್ತಾವಿಕವಾಗಿ ರಂಗರಾವ್ ದೇಸಾಯಿ ಮಾಡಿದರು.          ಸ್ವಾಗತ, ನಿರೂಪಣೆ, ನಿರ್ವಹಣೆ ಜಯ ಕುಮಾರ್ ದೇಸಾಯಿ ಮಾಡಿದರು. 

                ಸಾಯಂಕಾಲ ಡಾ.ಮುದ್ದುಮೋಹನ್ ರವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಿತು. ರೇವಯ್ಯ ವಸ್ತ್ರದ್ ಹೋರ್ಮೋನಿಯಮ್, ಜಯರಾವ ಕುಲಕರ್ಣಿ ತಬಲಾ, ಬಸವರಾಜ ಸಾಲಿ, ಉಮೇಶ್ ಪಾಂಚಾಲ್ ತಂಬೂರಿ ಸಾಥ್ ನೀಡಿದರು.   ಲಹರಿ ದೇಸಾಯಿ ಮನಮೋಹಕ ಭರತ ನಾಟ್ಯ ನೃತ್ಯ ಪ್ರಸ್ತುತ ಪಡಿಸಿದಳು.

  ರಾತ್ರಿ ಪಲ್ಲಕ್ಕಿ ಉತ್ಸವ, ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾನದಿಗೆ ಆರತಿ ನೆರವೇರಿಸಲಾಯಿತು.  ಈ ಸಂದರ್ಭದಲ್ಲಿ ದಾಮೋದರ್ ಆಚಾರ ಪುರೋಹಿತ, ವಾಸುದೇವ ಆಚಾರ ಕಲ್ಯಾಣಿ, , ಅಭಿಷೇಕ, ಪ್ರಹ್ಲಾದ ಆಚಾರ , ಪ್ರಸನ್ನ ಆಲಂಪಲ್ಲಿ, ಬಿ.ಜಿ.ಕುಲಕರ್ಣಿ ಗಂಜಹಳ್ಳಿ, ತಿರುಮಲರಾವ್ ವಡ್ಡೆಪಲ್ಲಿ, ಅನಂತಾಚಾರ ಕೊಪ್ಪರ,ಕೃಷ್ಣಾಚಾರ್, ಅಶ್ವಿನಿ ದೇಸಾಯಿ,  ಲಹರಿ, ಶಶಿಕಲಾ,ರಾಧಾ, ಲಕ್ಷ್ಮೀ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ