ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ
ಜಯ ಧ್ವಜ ನ್ಯೂಸ್ ರಾಯಚೂರು, ಡಿ.17-
ರಾಯಚೂರು ಅಗ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಎರೆಡು ದಿನಗಳ ಕಾಲ ನಡೆದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಒಟ್ಟು ೧೪ ತಂಡಗಳು ಭಾಗವಹಿಸಿದ್ದರು.
ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಶ್ರೀ ಕೃಷ್ಣ ತಂಡ ಅಂಜನಿಪುತ್ರ ತಂಡವನ್ನು ಮಣಿಸಿತು. ಗೆದ್ದ ತಂಡಕ್ಕೆ ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಸಂಘದ ಗೌರವಾಧ್ಯಕ್ಷ ವಿ.ನಾಗಿರೆಡ್ಡಿ ಮತ್ತು ಸಂಘದ ಅಧ್ಯಕ್ಷ ಆನಂದರಾವ್ ಕಪ್ ವಿತರಿಸಿದರು.ಕೃಷಿ ಪರಿಕರ ಮಾರಾಟಗಾರರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.
Comments
Post a Comment