ನಗರದಲ್ಲಿ ಶ್ರೀ ಮದಾರ್ಯ ಅಕ್ಷೋಭ್ಯ ತೀರ್ಥರ ಆರಾಧನೆ ನಿಮಿತ್ಯ ವಿಚಾರ ಗೋಷ್ಠಿ. ಜಯ ಧ್ವಜ ನ್ಯೂಸ್, ರಾಯಚೂರು, ಡಿ.19- ನಗರದ ಎನ್.ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಮದಾರ್ಯ ಅಕ್ಷೋಭ್ಯ ತೀರ್ಥರ ಆರಾಧನೆ ನಿಮಿತ್ಯ ವಿಚಾರ ಗೋಷ್ಠಿ ಹೊಮ್ಮಿಕೊಳ್ಳಲಾಗಿತ್ತು. ದಿವ್ಯ ಸಾನಿಧ್ಯವನ್ನು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದಂಗಳವರು ಮತ್ತು ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ವಹಿಸಿದ್ದರು.
ವಿಚಾರ ಗೋಷ್ಠಿಯಲ್ಲಿ ಶ್ರೀ ವಾದಿರಾಜ ಆಚಾರ್, ದ್ವಾರಕಾನಾಥ್ ಆಚಾರ್, ರಾಜಶ್ರೀ ರಾಜಶ್ರೀ ಕಲ್ಲೂರಕರ್ , ಮಧುಮತಿ ದೇಶಪಾಂಡೆ , ಪವನ್ ಕುಮಾರ್ , ವಸುಧೇಂದ್ರ ಸಿರವಾರ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಪಂಡಿತರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಮಹಿಳೆಯರು ಪಾಲ್ಗೊಂಡಿದ್ದರು.
Comments
Post a Comment