ದಾಸ ಸಾಹಿತ್ಯದ ಮಾನ್ಯರು, ಮಹಾಮಹಿಮರು ಮಹಿಪತಿ ದಾಸರು-ಮುರಳಿಧರ ಕುಲಕರ್ಣಿ                       ಜಯಧ್ವಜ ನ್ಯೂಸ್ ರಾಯಚೂರು, ಡಿ.2-                                                 ದಾಸ ಸಾಹಿತ್ಯದ ಮಾನ್ಯರು, ಪ್ರಾಥಸ್ಮರಣೀಯರು, ಮಹಾಮಹಿಮರಾದ  ಮಹಿಪತಿ ದಾಸರು ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ, ಮರಾಠಿ, ಕನ್ನಡದಲ್ಲಿ 700ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪುರಂದರ ದಾಸರ ನಂತರ ದಾಸ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ಮಹಿಪತಿ  ದಾಸರದ್ಧಾಗಿದೆ, ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು  ಹೇಳಿದರು.

 ಅವರು ಆದಿವಾರ ಸಂಜೆ ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ಮಹಿಪತಿ ದಾಸರ 343ನೇ ಆರಾಧನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

   ಮಹಿಪತಿ ದಾಸರ ಜೀವನ ಚರಿತ್ರೆ ಯೇ ಅತಿ ವಿಸ್ಮಯದಿಂದ ಕೂಡಿದೆ. ಅವರು ಬಿಜಾಪುರದ ಸುಲ್ತಾನನ ಆಸ್ಥಾನದಲ್ಲಿ ಖಜಾಂಚಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಅವರ ಜೀವನದಲ್ಲಿ ನಡೆದ ವಿಚಿತ್ರ ಘಟನೆಯಿಂದ ಇಡೀ ಸಂಪತ್ತು,  ರಾಜ ಮರ್ಯಾದೆ, ಮುಂತಾದವುಗಳನ್ನು ತ್ಯಜಿಸಿ, ವೈರಾಗ್ಯಶಿಖಾಮಣಿಗಳಾಗಿ ಭಕ್ತಿ ಪಂಥವನ್ನು ಬೆಳೆಸಿದ ಹರಿದಾಸರಾದರು ಎಂದು ಅವರು ಹೇಳಿದರು. 


    ಕಾರ್ಯಕ್ರಮದಲ್ಲಿ ಗಮಕಾ ಕಲಾಪರಿಷತ್ತಿನ ಅಧ್ಯಕ್ಷರಾದ ವೆಂಕಟರಾವ ಕುಲಕರ್ಣಿಯವರು ಮಾತನಾಡಿ, ಹರಿದಾಸರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ 

ನಮ್ಮನ್ನೆಲ್ಲ ಉದ್ದರಿಸಿದ್ದಾರೆ. 

ಅವರ ಎಲ್ಲ ಹರಿನಾಮ ಸಂಕೀರ್ತನೆಗಳು ನಮ್ಮ  ಆತ್ಮೋದ್ಧಾರ ಮಾಡುವ ಸಂಜೀವಿನಿಗಳಾಗಿವೆ. ಅದರಲ್ಲಿ ವಿಶೇಷವಾಗಿ ಮಹಿಪತಿ ದಾಸರ ಸಂಕೀರ್ತನೆಗಳು ಭಕ್ತಿಯ ಪರಾಕಾಷ್ಟೆ ಯನ್ನು ತಲುಪಿವೆ ಎಂದು ಹೇಳಿದರು.


 

 ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ ಮಹಿಪತಿ ದಾಸರು ವೈರಾಗ್ಯ ಶಿಖಾಮಣಿಗಳಾಗಿ ಇಡೀ ಜೀವನವನ್ನೇ ದಾಸ ಸಾಹಿತ್ಯಕ್ಕೆ ಅರ್ಪಿಸಿಕೊಂಡು ಜನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ತೋರಿಸಿಕೊಟ್ಟ ಮಹನೀಯರು ಎಂದು ಹೇಳಿದರು. 

   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾರುತಿ ಭಜನಾ ಮಂಡಳಿಯ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ ಅವರು ಮಾತನಾಡಿ ದಾಸ ಸಾಹಿತ್ಯ ಎಲ್ಲರ ಉದ್ಧಾರಕ ಸಾಹಿತ್ಯವಾಗಿದೆ. ಈ ಸಾಹಿತ್ಯವನ್ನು ಸಾಮಾಜಿಕವಾಗಿ ಬೆಳೆಸುವ  ಮೂಲಕ  ಪ್ರತಿಯೊಬ್ಬರ ಸಾಹಿತ್ಯವೆಂದು ರೂಪಿಸಬೇಕಾಗಿದೆ ಎಂದು ಹೇಳಿದರು.   


     ಕಾರ್ಯಕ್ರಮವನ್ನು ಹಿರಿಯರಾದ ಸುರೇಶ್ ಕಲ್ಲೂರ್ ಅವರು ಉದ್ಘಾಟಿಸಿ ಶುಭ ಹಾರೈಸಿ ಶ್ರೀಮಹಿಪತಿದಾಸರು

 ರಚಿಸಿದ ಕೀರ್ತನೆಗಳನ್ನು ಹಾಡಿದರು. 

     ಮಹಿಪತಿ ದಾಸರ ಭಾವಚಿತ್ರಕ್ಕೆ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರಾಚಾರ್ ಮುಂಗಲಿ ಅವರು ಪೂಜೆ ಸಲ್ಲಿಸಿ, ಮಂಗಳಾರತಿಯನ್ನು ಮಾಡಿದರು. 

   ಈ ಸಂದರ್ಭದಲ್ಲಿ ಇಂದಿರಾ ಬಾಯಿ ಸಂಗಮ್, ವೆಂಕಟೇಶ್ ಕೋಲಾರ್, ರವೀಂದ್ರ ಕುಲಕರ್ಣಿ, ವಾಸುಕಿ ಕರಣಂ ಅವರಿಂದ ದಾಸವಾಣಿ ಜರುಗಿತು. 

   ಕಾರ್ಯಕ್ರಮದಲ್ಲಿ ಪ್ರಸನ್ನ ಆಲಂಪಲ್ಲಿ, ರಾಘವೇಂದ್ರ ಜಾಗೀರ್ದಾರ್, ಗುರುರಾಜ್ ಉಪಾಧ್ಯಾಯ, ಗೋಪಾಲಾಚಾರ್ಯ, ಪಾಂಡುರಂಗ, ಕೃಷ್ಣಮೂರ್ತಿ ಹುಣಸಿಗಿ, ಎಂ ಅನಿಲ್ ಕುಮಾರ್ ಕೊಪ್ರೇಶ್ ದೇಸಾಯಿ ಎ. ಪ್ರಕಾಶ್, ಕಾಂತರಾಜ್ ತುಂಗಭದ್ರ

 ಪರಿಮಳಬಾಯಿ , ನಾಗರತ್ನ ಕಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.

  ನಂತರ ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ ಕಾರ್ಯಕ್ರಮ ಜರಗಿತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ