ದೇವರ ನೂರಾರು ಕೀರ್ತನೆಗಳನ್ನು ರಚಿಸಿದ ಶ್ರೀ ರಾಮದಾಸರು ಶ್ರೇಷ್ಠ ಹರಿದಾಸರು - ಮುರಳೀಧರ ಕುಲಕರ್ಣಿ

ಜಯಧ್ವಜ ನ್ಯೂಸ್ , ರಾಯಚೂರು ,ಡಿ.26-                                    ಬಡೇ ಸಾಹೇಬರು ಶ್ರೀರಾಮದಾಸರಾಗಿ   ಮದ್ವ ಮತಕ್ಕೆ  ಅನುಗುಣವಾಗಿ ಶ್ರೀರಾಮ ಅಂಕಿತದಿಂದ 800ಕ್ಕೂ ಅಧಿಕ ಸಂಕೀರ್ತನೆಗಳನ್ನು ರಚಿಸಿದ ಶ್ರೇಷ್ಠ  ಹರಿ ದಾಸ ರಾಗಿದ್ದಾರೆ .ಎಂದು 

ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.

      ಅವರು ನಿನ್ನೆ ಬುಧವಾರ ಸಂಜೆ  ರಾಯಚೂರಿನ  ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ 83ನೇ ಶ್ರೀ ರಾಮದಾಸರ ಆರಾಧನೆಯ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 


  ರಾಯಚೂರು ಜಿಲ್ಲೆಯ ಜೋಳ ದಡಗಿ ಇವರ ಜನ್ಮಸ್ಥಳಗೋನವಾರ  ಇವರು ಓಡಾಡಿದ ತಾಣ ಲಿಂಗದಹಳ್ಳಿಯಲ್ಲಿ ಇವರ ಬೃಂದಾವನವಿದೆ. ವೈರಾಗ್ಯ ಭಾವನೆ ಯನ್ನು ತಾಳಿದ ಇವರು ಶ್ರೀರಾಮದೂತ ರಿಂದ ಅಂಕಿತ ಪಡೆದು ಅತ್ಯುತ್ತಮ  ಶೈಲಿಯ ಸಂಕೀರ್ತನೆಗಳನ್ನು, ಊಗಾ-ಬೋಗಗಳನ್ನು, ಶತಾಷ್ಟಕಗಳನ್ನು, ಕೋಲಾಟ, ಹಾಗು ಗೀಗಿ ಪದಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಇವರ ಕೃತಿಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ ರಾಮದಾಸರು  ಭಾವೈಕ್ಯತೆ ಹರಿಕಾರರು ಎಂದು ಅವರು ಹೇಳಿದರು. 


ಕಾರ್ಯಕ್ರಮದಲ್ಲಿ  ಪತ್ರಕರ್ತರಾದ ಶ್ರೀ ಜಯ ಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ 
ಶ್ರೀರಾಮದಾಸರ ಸಂಕೀರ್ತಿನೆಗಳು ಇಂದಿಗೂ ಪ್ರಸ್ತುತವಾಗಿವೆ.  ಅವರು  ಸಾಮಾಜಿಕ ಮೌಲ್ಯ, ಜಾತಿ ಪದ್ಧತಿ, ಮೌಢ್ಯತೆ, ಕಂದಾಚಾರ ಇವುಗಳನ್ನು ಖಂಡಿಸಿ  ಕೃತಿಗಳನ್ನು ರಚಿಸಿದ್ದಾರೆ. ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಹೇಳಿದರು. 

   ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀ ಸುರೇಶ್ ಕಲ್ಲೂರ  ವಹಿಸಿ ಶ್ರೀ ರಾಮದಾಸರು ರಚಿಸಿದ ಸಂಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ಪ್ರಸನ್ನ ಆಲಂಪಲ್ಲಿ ಅವರು ಉದ್ಘಾಟಿಸಿ ಆರಾಧನಾ ಮಹೋತ್ಸವಕ್ಕೆ ಶುಭ ಕೋರಿದರು. 

 ಶ್ರೀರಾಮದಾಸರ ಭಾವಚಿತ್ರಕ್ಕೆ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀಧರಾಚಾರ್ಯ ಮುಂಗಲಿ ಯವರು ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿದರು. 

 ಈ ಸಂದರ್ಭದಲ್ಲಿ ಕೊಪ್ರೇಶ್ ದೇಸಾಯಿ, ಕೃಷ್ಣಮೂರ್ತಿ ಹುಣಸಿಗಿ, ಶ್ರೀಮತಿ ನಾಗರತ್ನ, 

ರಾಘವೇಂದ್ರ ಜಾಗೀರ್ದಾರ್, ಕೆ ಲಕ್ಷ್ಮಿಕಾಂತ್ ತುಂಗಭದ್ರಾ ಇವರುಗಳು ಉಪಸ್ಥಿತರಿದ್ದರು.  ಕೊನೆಯಲ್ಲಿ ಶ್ರೀಮತಿ ಸುಷ್ಮಾ ಕರಣಂ ಇವರಿಂದ ದಾಸವಾಣಿ ಜರುಗಿತು.

Comments

Popular posts from this blog