ಡಿ.8 ರಂದು ಕೃಷಿ ಸಚಿವರಿಂದ ಅಗ್ರಿಗೇಡರ್ ಡಿಜಿಟಲ್ ಸ್ಟರ‍್ಟ್ಅಪ್ ಉದ್ಘಾಟನೆ:
ರೈತರ ಉತ್ಪನ್ನಗಳಿಗೆ ಜಾಗತಿಕ ದರ ದೊರಕಿಸುವ ಉದ್ದೇಶ- ಶ್ರೀರಾಮ
ಜಯಧ್ವಜ ನ್ಯೂಸ್, ರಾಯಚೂರು,ಡಿ.4-
ನಗರದಲ್ಲಿ ಡಿ.8 ರಂದು ನಡೆಯುವ ಕೃಷಿ ಮೇಳದಲ್ಲಿ ಅಗ್ರಿಗೇಡರ್ ಡಿಜಿಟಲ್ ಸ್ಟರ‍್ಟ್ಅಪ್ ಉದ್ಘಾಟನೆ ನೆರವೇರಲಿದೆ ಎಂದು ಅಗ್ರಿಗೇಡರ್ ಸಿಇಓ ಶ್ರೀರಾಮ್ ಹೇಳಿದರು.
ಅವರು ಬುಧವಾರ ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ನಗರದ ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ನಮ್ಮ ಸ್ಟರ‍್ಟ್ಅಪ್ ಉದ್ಘಾಟಿಸಲಿದ್ದಾರೆ ಎಂದರು.
ಅಗ್ರಗೇಡರ್ ಮುಖ್ಯ ಉದ್ದೇಶ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ದರ ದೊರಕಿಸಿಕೊಡುವ ಜೊತೆಗೆ ಅವರು ಒಂಚನೆಗೊಳಗಾಗದಂತೆ ನೋಡಿಕೊಳ್ಳುವುದಾಗಿದೆ ಎಂದ ಅವರು ಜಿಲ್ಲೆ ಕೃಷ್ಣಾ ಹಾಗೂ ತುಂಗಭದ್ರ ಜೀವನದಿಯುಳ್ಳ ಪ್ರದೇಶವಾಗಿದೆ ವಾರ್ಷಿಕ ಸಾವಿರಾರು ಕೋಟಿಯ ಭತ್ತದ ವಹಿವಾಟು ನಡೆಯುತ್ತದೆ ಜಾಗತಿಕವಾಗಿ ಇಲ್ಲಿಯ ಅಕ್ಕಿಗೆ ಉತ್ತಮ ಬೇಡಿಕೆಯಿದೆ ಎಂದರು.
ರೈತರಿಗೆ ಜಾಗತಿಕವಾಗಿ ಖರೀದಿದಾರರನ್ನು ರೈತರೊಂದಿಗೆ ಬೆಸೆಯುವ ಈ ಡಿಜಿಟಲ್ ಪ್ಲಾಟ್‌ಫಾರಂ ರೈತರಿಗೆ ಯಾವುದೆ ದರ ವಿಧಿಸದೆ ಅದನ್ನು ಖರೀದಿದಾರಿಂದಲೆ ಕ್ವಿಂಟಲ್ ಗೆ 20 ರೂ .ನಿಗದಿಪಡಿಸಿ ಅವರಿಂದಲೆ ಪಡೆಯುತ್ತೇವೆಂದರು.
ನಾನು ಸುಮಾರು 15 ವರ್ಷದಿಂದ ಈ ವೃತ್ತಿಯಲ್ಲಿದ್ದು ನಮ್ಮ ತಂಡ ವಿವಿಧ ಉತ್ಪನ್ನಗಳ ಮಾರಾಟದ ಅನುಭವಹೊಂದಿದೆ ಎಂದ ಅವರು ರೈತರು ವರ್ತಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ಮಾಡಲಿದ್ದು ವಿಶ್ವಾಸಾರ್ಹತೆ ನಮ್ಮ ಧ್ಯೇಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉದಯಕಿರಣ್,ಸುಮಿತ್, ಫಯಾಜ್, ಸಂದೀಪ್ ಜೈನ್,ಗಿರಿರಾಜ ಇದ್ದರು.
Comments
Post a Comment