ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ:
ಕೂಡಲೆ ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲಿಸಬೇಕು- ಕೃಷ್ಣಾ ಜೋಷಿ
ಜಯ ಧ್ವಜ ನ್ಯೂಸ್, ರಾಯಚೂರು,ಡಿ.4-
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕೆಂದು ಕಲಬುರ್ಗಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆ ವ್ಯವಸ್ಥಾಪಕರು ಹಾಗೂ ಅರ್‌ಎಸ್ಸೆಸ್ ಉತ್ತರ ಪ್ರಚಾರ ಪ್ರಮುಖ ಕೃಷ್ಣ ಜೋಷಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಹಿಂದೂ ಹಿತರಕ್ಷಣಾ ಸಮಿತಿವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಮಾನುಷವಾಗಿ ನಡೆದುಕೊಳ್ಳಲಾಗುತ್ತದೆ ಇಸ್ಕಾನ್ ಸಂಸ್ಥೆಯ ಪೂಜ್ಯ ಶ್ರೀ ಚಿನ್ಮಯ ಕೃಷ್ಣಾ ಸ್ವಾಮಿಜಿ ಮತ್ತಿತರ ಸನ್ಯಾಸಿಗಳು ಮತ್ತು ಇಸ್ಕಾನ್ ವಕೀಲರ ಮೇಲೆಯೂ ಹಲ್ಲೆ ನಡೆದಿದೆ ಇಸ್ಕಾನ ಸಂಸ್ಥೆಯ ಸ್ವಾಮೀಜಿಗಳನ್ನು ಬಂಧಿಸಲಾಗಿದೆ ಇದೊಂದು ಸಂವಿಧಾನ ವಿರೋಧಿ ಕೃತ್ಯ ಇದಕ್ಕೆ ಅಲ್ಲಿನ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಭಾರತ ಸರ್ಕಾರ ಬಾಂಗ್ಲಾದೇಶದಲ್ಲಿರುವ ಪ್ರಜೆಗಳ ಸಂರಕ್ಷಣೆ ಮಾಡುವುದರ ಜೊತೆಗೆ ಅಲ್ಲಿನ ಸರ್ಕಾರಕ್ಕೆ ತಿಳಿಹೇಳಬೇಕು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ನಿಯಂತ್ರಿಸಬೇಕೆಂದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ಮಾತನಾಡಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ ಪ್ರಜಾಪ್ರಭುತ್ವ ವಿರೋ ನಡೆಯಾಗಿದೆ ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ಅಸಹನೀಯವೆಂದರು.
ಮಿಟ್ಟಿಮಲ್ಕಾಪೂರು ನಿಜಾನಂದ ಶರಣರು ಮಾತನಾಡಿ ಬಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕ್ರೌರ್ಯಕ್ಕೆ ಭಾರತದ ಹಿಂದೂಗಳೆಲ್ಲರು ಒಗ್ಗಟ್ಟಿನಿಂದ ಪ್ರತಿಭಟನೆ ಮಾಡಬೇಕು ನಾವೆಲ್ಲ ಹಿಂದೂ ಎಂಬ ಭಾವನೆ ಮೂಡಬೇಕು ಬಂಗ್ಲಾ ಸರ್ಕಾರಕ್ಕೆ ನಮ್ಮ ಕೂಗು ತಲುಪಬೇಕೆಂದರು.
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ಭಾರತದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂಗಳ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡಲಾಗುತ್ತಿದೆ ಅಲ್ಲಿನ ಇಸ್ಕಾನ ಸ್ವಾಮಿಜಿಗಳನ್ನು ಬಂಸಲಾಗಿದೆ ಅವರಿಗೆ ಕಾನೂನು ರಕ್ಷಣೆ ನೀಡಲು ತೆರಳಿದ್ದ ವಕೀಲರ ಮೇಲೆ ಹಲ್ಲೆ ನೆಸಲಾಗಿದೆ ಇದೊಂದು ದುಷ್ಕೃತ್ಯ ಇದಕ್ಕೆ ಅಲ್ಲಿನ ಸರ್ಕಾರ ಮೂಕ ಪ್ರೇಕ್ಷಕರಾಗಿ ಕೂಡದೆ ಸಮಾಜ ಘಾತುಕ ಶಕ್ತಿಗಳ ಮೇಲೆ ಕ್ರಮ ವಹಿಸಬೇಕೆಂದರು.
ಪ್ರತಿಭಟನೆಯಲ್ಲಿ ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಶ್ರೀಗಳು, ಚೀಕಲಪರ್ವಿ ಮಠದ ಸದಾಶಿವ ಶ್ರೀಗಳು, ಮಂಗಳವಾರಪೇಟೆ ಹಿರೇಮಠ ಷಟಸ್ಥಲ ವೀರ ಸಂಗಮೇಶ್ವರ ಶಿವಾಚಾರ್ಯಶ್ರೀಗಳು, ಕಲ್ಲೂರು ಅಡವೀಶ್ವರ ಮಠದ ಶಂಭುಲಿಂಗ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮುಖಂಡರಾದ ಶಿವಬಸಪ್ಪ ಮಾಲೀಪಾಟೀಲ, ತ್ರಿವಿಕ್ರಮ ಜೋಷಿ,ರವೀಂದ್ರ ಜಲ್ದಾರ್, ಕಡಗೋಲ ಆಂಜಿನೇಯ್ಯ, ರಾಜಕುಮಾರ್, ರಮಾನಂದ ಯಾದವ್, ನರಸಿಂಗರಾವ ದೇಶಪಾಂಡೆ, ನಾಗರಾಜ.ಎ, ಅಶೋಕ ಪಾಟೀಲ ಅತ್ತನೂರು, ಸಾವಿತ್ರಿ ಪುರುಷೋತ್ತಮ, ರಾಜೇಂದ್ರ ಹರವಿ, ಡಾ.ಆನಂದತೀರ್ಥ ಫಡ್ನೀಸ್, ಬಿ.ಗೋವಿಂದ,ನಾರಾಯಣರಾವ್ ಪುರತಿಪ್ಲಿ, ಡಾ.ನಾಗರಾಜ ಭಾಲ್ಕಿ, ನರಸರೆಡ್ಡಿ, ಶಶಿರಾಜ ಮಸ್ಕಿ, ವಿಜಯಕುಮಾರ್ ಸಜ್ಜನ,ವೇಣುಗೋಪಾಳ ಇನಾಂದಾರ್, ವಿನೋದ್ ಕಿಕ್ಕೇರಿ, ವಿಜಯ ರಾಜೇಶ್ವರಿ, ಶರಣಮ್ಮ ಕಾಮರೆಡ್ಡಿ, ನಾಗವೇಣಿ, ಸುನೀತಾ ಕಕ್ಕೇರಿ, ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇದ್ದರು.
Comments
Post a Comment