ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ಸಮ್ಮೇಳನಕ್ಕೆ ಆಹ್ವಾನ :ಕರಪತ್ರ ಬಿಡುಗಡೆ


 ರಾಯಚೂರು,ಡಿ.12- ಶ್ರೀ ಯೋಗಿಶ್ವರ ಯಾಜ್ಞ ವಲ್ಕ್ಯ್ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸ್ವಾಗತ ಸಮಿತಿ ಕಾರ್ಯಧ್ಯಕ್ಷ ರಾದ ಶ್ರೀ ಸತ್ಯನಾರಾಯಣ ಮರಟಗೇರಿ ಹೇಳಿದರು. ಅವರು ಬುಧವಾರ ಶ್ರೀಮನ್ ಮಾಧವತೀರ್ಥರ ಸನ್ನಿಧಾನ ದಲ್ಲಿ ಯಾ.ಸ್ವ.ಸೇ.ಸ ಅಧ್ಯಕ್ಷರಾದ ಶ್ರೀ ರಮೇಶ ಬಾದರ್ಲಿ ,ಸತ್ಯನಾರಾಯಣ ಜೋಷಿ ಯವರ ಸಮ್ಮುಖದಲ್ಲಿ  *ರಾಜ್ಯ ಸಮ್ಮೇಳನದ ಕರಪತ್ರ* ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. *ಡಿಸೆಂಬರ್ 28 ಹಾಗೂ 29 ಎರಡು ದಿನಗಳ ಕಾಲ *ಸಮ್ಮೇಳನ ಹುಬ್ಬಳ್ಳಿಯ ಗೋಕುಲ್ ಗಾರ್ಡನ್* ನಲ್ಲಿ ನಡೆಯಲಿದೆ. 28 ರಂದು ಸಹಸ್ರ ಮೋದಕ ಗಣಪತಿ ಹೋಮ ನಡೆಯಲಿದೆ. ಸಮ್ಮೇಳನವನ್ನು ಹುಣಸಿಹೊಳೆ ಕಣ್ವಮಠದ ಪೀಠಾಧಿಪತಿಗಳಾದ *ಶ್ರೀ ಶ್ರೀವಿದ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು.


* ಸ್ಮರಣ ಸಂಚಿಕೆ, ಭಜನಾ ಪುಸ್ತಕ ಬಿಡುಗಡೆ ಸೇರಿದಂತೆ ಹಲವು ವಿದಾಯಕ ವೇದಿಕೆ ಕಾರ್ಯಕ್ರಮಗಳು, ಗೋಷ್ಟಿಗಳು, ಶೋಭಯಾತ್ರೆ, ವಿಪ್ರ ನಗೆ 28 ರಂದು ನಡೆಯಲಿವೆ.

ಮರುದಿನ 29 ರಂದು ವಿದ್ವದ್ ಗೋಷ್ಟಿಗಳು, ಮಹಿಳಾ ಗೋಷ್ಠಿಗಳು, ವಿವಿಧ ಸಾಧಕರಿಗೆ ಪ್ರಶಸ್ತಿಗಳ ಪ್ರದಾನ ಮಾಡಲಾಗುವುದು. ವಿವಿಧ ಮಠಗಳ ಪೀಠಾಧಿಪತಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು.    ಎರಡು ದಿನ ನಡೆಯುವ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ *ವಿಪ್ರ ಬಾಂಧವರು, ಯಾಜ್ಞವಲ್ಕ್ಯ್ ರ ಅನುಯಾಯಿಗಳು ಆಗಮಿಸ ಬೇಕು. ತನು, ಮನ, ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು. 

ಕಣ್ವ ಕಣ್ಮಣಿ,ವಿಪ್ರಶ್ರೀ ಶ್ರೀ ಸತ್ಯನಾರಾಯಣ ಮುಜುಂದಾರ ಹಾಗೂ ಶ್ರೀ ಮದ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ ಸದಸ್ಯ ರಾದ ಹಾಗೂ ಸಮ್ಮೇಳನದ ಮಾಧ್ಯಮ ಉಸ್ತುವಾರಿಗಳಾದ ಶ್ರೀ ಪ್ರಸನ್ನ ಆಲಂಪಲ್ಲಿ  ಅವರ ಮನೆಗೆ ಭೇಟಿಯಿತ್ತು ಸಮ್ಮೇಳನ ಆಯೋಜನೆ ಕುರಿತಾಗಿ ಚರ್ಚಿಸಿ ಆಹ್ವಾನ ನೀಡಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ