ಪತ್ರಕರ್ತ ಬಿ.ಎ.ನಂದಿಕೋಲಮಠ ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ದಾಂಜಲಿ. ಜಯ ಧ್ವಜ ನ್ಯೂಸ್, ರಾಯಚೂರು, ಜ.9- ಇತ್ತೀಚೆಗೆ ನಿಧನರಾದ ಪ್ರಜಾವಾಣಿ ಪತ್ರಿಕೆ ಲಿಂಗಸುಗೂರು ತಾಲ್ಲೂಕ ವರದಿಗಾರ ಬಿ.ಎ.ನಂದಿಕೋಲ ಮಠ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಬಿ.ಎ.ನಂದಿಕೋಲಮಠ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯನ್ನುದ್ದೇಶಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪತ್ರಕರ್ತರಾದ ಬಿ.ವೆಂಕಟಸಿಂಗ್, ಭೀಮರಾಯ ಹದ್ದಿನಾಳ, ವಿಶ್ವನಾಥ ಹೂಗಾರ, ವೆಂಕಟೇಶ ಹೂಗಾರ ಮಾತನಾಡಿ, ಪತ್ರಕರ್ತ ಬಿ.ಎ.ನಂದಿಕೋಲಮಠ ಅಕಾಲಿಕ ನಿಧನದಿಂದ ಜಿಲ್ಲೆಯ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾದ ನಷ್ಟವಾಗಿದೆ ಎಂದರು.
ಜನರ ಸಮಸ್ಯೆಗಳ ಕುರಿತು ವರದಿ ಮಾಡುವುದರ ಮೂಲಕ ತಾಲ್ಲೂಕಿನ ಜನರ ಅಚ್ಚುಮೆಚ್ಚಿನ ಪತ್ರಕರ್ತರಾಗಿದ್ದರು. ಹೋರಾಟಗಾರರ ಒಡನಾಡಿ ಎಂದು ಗುರುತಿಸಿಕೊಂಡಿದ್ದರು. ಸ್ನೇಹ ಜೀವಿ ನಂದಿಕೋಲಮಠ ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ವಾಹನ ಚಲಾಯಿಸುವ ಸಂದರ್ಭದಲ್ಲಿ ಅಜಾಗರೂಕತೆ ತೋರದೆ ಪತ್ರಕರ್ತರು ಸುರಕ್ಷತೆ ನಿಯಮಗಳನ್ನು ಪಾಲಿಸುವ ಮೂಲಕ ಅಮೂಲ್ಯ ಜೀವ ಉಳಿಸಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಪತ್ರಕರ್ತರಾದ ವೀರನಗೌಡ, ಬಸವರಾಜ ನಾಗಡದಿನ್ನಿ, ಸಿದ್ದಯ್ಯಸ್ವಾಮಿ ಕುಕನೂರು, ಮಲ್ಲಿಕಾರ್ಜುನಯ್ಯ ಸ್ವಾಮಿ,ಆನಂದ ಕುಲಕರ್ಣಿ, ವಿಜಯಕುಮಾರ ಜಾಗಟಕಲ್, ಶ್ರೀಕಾಂತ ಸಾವೂರು,ಮಹಾನಂದ, ಭೀಮೇಶಪೂಜಾರ್, ಸುರೇಶ ರೆಡ್ಡಿ, ಮೇಟಿಗೌಡ, ಗೌಡಪ್ಪ ಗೌಡ, ಜಯಕುಮಾರ ದೇಸಾಯಿ ಕಾಡ್ಲೂರು, ಜಗನ್ನಾಥ ಪೂಜಾರ್, ಗಿರಿಧರ್ ಕುಲಕರ್ಣಿ,ಅನಿಲ್, ದುರುಗೇಶ, ಮಲ್ಲನಗೌಡ, , ಬಸನಗೌಡ, ಲಕ್ಷö್ಮಣರಾಯ ಕಪಗಲ್, ಪ್ರಸನ್ನಕುಮಾರ ಜೈನ್,ರಂಗಸ್ವಾಮಿ, ಅಬ್ದುಲ್ ಖಾದರ್, ಜಿಲಾನಿ, ಅಯ್ಯಪ್ಪ ಪಿಕಳಿಹಾಳ,ಶಿವು, ಶ್ರೀನಿವಾಸ, ಸಂದೀಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Comments
Post a Comment