ವೈಕುಂಠ ಏಕಾದಶಿ ಅಂಗವಾಗಿ ಶ್ರೀ ಬದರಿನಾರಾಯಣ ದೇವಸ್ಥಾನದಲ್ಲಿ ಏಕಾದಶ ವಿಷ್ಣು ಸಹಸ್ರ ನಾಮ ಹೋಮ
ಜಯ ಧ್ವಜ ನ್ಯೂಸ್ ,ರಾಯಚೂರು.ಜ.10
ವೈಕುಂಠ ಏಕಾದಶಿ ಪ್ರಯುಕ್ತ ನಗರದ ಬದರಿನಾರಾಯಣ ಬಡಾವಣೆಯ ಶ್ರೀ ಬದರಿನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಹೋಮ ಹವನಗಳು ಶುಕ್ರವಾರ ನಡೆದವು.
ದೇವಸ್ಥಾನದ ಮುಖ್ಯಸ್ಥರಾದ ವೇ.ಮೂ.ಭೀಮಸೇನಾಚಾರ್ ಸಿರಗುಂಪಿ ನೇತೃತ್ವದಲ್ಲಿ ಬೆಳಿಗ್ಗೆ ಸುಪ್ರಭಾತ, ನೀರ್ಮಾಲ್ಯ ವಿಸರ್ಜನೆ,ಮಹಾಮಂಗಳಾರತಿ ಹನ್ನೊಂದು ಹೋಮ ಕುಂಡಗಳಲ್ಲಿ ಏಕಾದಶ ವಿಷ್ಣುಸಹಸ್ರನಾಮ ಹೋಮಗಳ ಪೂರ್ಣಾಹುತಿ ನೆರವೇರಿತು. ಪಂಡಿತರಿಂದ ಭಾಗವತ ಪ್ರವಚನ ನೆರವೇರಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ಯ ಶ್ರೀ ಬದರಿನಾರಾಯಣ ದೇವರಿಗೆ ಭವ್ಯವಾಗಿ ತುಳಸಿಹಾರ ಅಲಂಕರಿಸಲಾಗಿತ್ತು , ವಿವಿಧ ಬಗೆಯ ಫಲಪುಷ್ಪಗಳಿಂದ ದೇವಸ್ಥಾನ ಕಂಗೊಳಿಸಿತು. ಉತ್ಸವ ಮೂರ್ತಿಗಳ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಮಾಧವಾಚಾರ್ ಜೋಷಿ ಮತ್ತು ಮಮತಾ ದೇಶಪಾಂಡೆಯವರಿಂದ ಸಂಗೀತ ಕಾರ್ಯಕ್ರಮ ನೇರವೇರಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಕಳೆಕಟ್ಟಿದವು. ಮಹಿಳಾ ಭಜನಾಮಂಡಳಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ದೇವರ ಸ್ತೋತ್ರಗಳ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಆರ್‌ಡಿಎ ಮಾಜಿ ಅಧ್ಯಕ್ಷ ಕಡಗೋಲ ಆಂಜಿನೇಯ್ಯ, ನಗರಸಭೆ ಸದಸ್ಯ ಇ.ಶಶಿರಾಜ, ಆಲಂಪಲ್ಲಿ ಪ್ರತಿಷ್ಟಾನದ ಅಧ್ಯಕ್ಷ ಮತ್ತು ಬ್ರಾಹ್ಮಣ ಸಮಾಜದ ಯುವಮುಖಂಡರಾದ ಪ್ರಸನ್ನ ಆಲಂಪಲ್ಲಿ, ರಮೇಶ ಬಾದರ್ಲಿ, ರಾಘವೇಂದ್ರ ಗುಡದೂರು,ಶ್ರೀನಿವಾಸ್, ಗೋಪಾಲ ಕೃಷ್ಣ ದ್ಯಾಸನೂರು, ಪ್ರದೀಪ ಸಾನಬಾಳ್, ರಮೇಶ ಸಾನಭಾಳ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment