ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಜ.15 ರಿಂದ ಫೆ.12ರವರಗೆ  57 ನೇ ವರ್ಷದ 29 ದಿನಗಳ ಮಹಾನ್ ಜ್ಞಾನಸತ್ರ ಕಾರ್ಯಕ್ರಮ :

ಫೆ.5 ರಂದು ಬೃಹತ್ ಶೋಭಾಯಾತ್ರೆ ಸೇರಿದಂತೆ ಧಾರ್ಮಿಕ ಮತ್ತು ಸಂಸ್ಕೃತಿಕ ಕಾರ್ಯಕ್ರಮ ವಿವಿಧ  ಮಠಾಧೀಶರ ಆಗಮನ - ಆನಂದಆಚಾರ್ಯ


ಜಯಧ್ವಜ ನ್ಯೂಸ್, ರಾಯಚೂರು, ಜ.13-


ನಗರದ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಜ.೧೫ ರಿಂದ ಫೆ.೧೨ರವರೆಗೆ ೫೭ ನೇ ವರ್ಷದ ೨೯ ದಿನಗಳ ಮಹಾನ್ ಜ್ಞಾನ ಸತ್ರ ನಡೆಯಲಿದೆ ಎಂದು ಆಯೋಜಕರಾದ ಆನಂದ ಆಚಾರ್ಯ ಹೇಳಿದರು.


ಅವರಿಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮುಂಗ್ಲಿ ಮುಖ್ಯ ಪ್ರಾಣ ಸೇವಾ ಸಮಿತಿ ಹಾಗೂ ಸಮಸ್ತ ಯುವಕ ಮಂಡಳಿ ಕೋಟೆ ಹಾಗೂ ವಿವಿಧ ಭಜನಾ ಮಂಡಳಿಗಳ ಸಹಯೋಗದೊಂದಿಗೆ ಜ.೧೫ ರಂದು ಸಂಜೆ ೬.೩೦ ಜ್ಞಾನಸತ್ರ ಕಾರ್ಯಕ್ರಮ ಉದ್ಘಾಟನೆಯನ್ನು ಮಂತ್ರಾಲಯ ಶ್ರೀ ಗುರಸಾರ್ವಭೌಮ ಸಂಸ್ಕೃತಿಕ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ವಾದಿರಾಜ ಆಚಾರ್ ನೆರವೇರಿಸಲಿದ್ದಾರೆ ಎಂದರು.



ಜ.೧೫ ಮತ್ತು ೧೬ ರಂದು ಸಂಜೆ ೭ಕ್ಕೆ ವಾದಿರಾಜ್ ಆಚಾರ್ ಆವರಿಂದ ಪ್ರವಚನ, ಜ.೧೭ ರಿಂದ ೧೯ ರವರೆಗೆ ಸಂಜೆ.೬.೩೦ಕ್ಕೆ ವೆಂಕಟ ನರಸಿಂಹ ಆಚಾರ್ ಅಚರಿಂದ ಪ್ರವಚನ,ಜ.೨೦ ರಿಂದ ೨೨ರವರೆಗೆ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರಿಂದ ಪ್ರವಚನ ನಡೆಯಲಿದೆ ಎಂದರು.

ಜ.೨೨ ರಂದು ಗೋಪಾಲದಾಸರ ಪುಣ್ಯ ತಿಥಿ ಅಂಗವಾಗಿ ಧನ್ವಂತರ ಹೋಮ ನಂತರ ಶ್ರೀ ಪಾದಂಗಳವರಿಂದ ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದ ಅವರು ಜ.೨೩ ರಿಂದ ೨೫ರವರೆಗೆ ಸಂಜೆ ೭ಕ್ಕೆ ವಾದಿರಾಜ ಆಚಾರ ಮಠದ್ ಅವರಿಂದ ಪ್ರವಚನ ನಡೆಯಲಿದೆ ಎಂದರು.

ಜ.೨೬ ಮತ್ತು ೨೭ ರಂದು ಸಂಜೆ ೭ಕ್ಕೆ ಕೃಷ್ಣಾಚಾರ್ ಅವರಿಂದ ಪ್ರವಚನ ನಡೆಯಲಿದ್ದು ಜ.೨೮ ರಿಂದ ೩೦ರವರೆಗೆ ಸಂಜೆ ೭ಕ್ಕೆ ಆನಂದ ಆಚಾರ್ ಮಳಗಿ ಅವರಿಂದ ಪ್ರವಚನ ನಡೆಯಲಿದ್ದು ಜ.೨೯ ರಂದು ಶ್ರೀ ಪುರಂದರ ದಾಸರ ಪುಣ್ಯ ತಿಥಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ, ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ, ಅನುಗ್ರಹ ಸಂದೇಶ ಹಾಗೂ ಸಂಸ್ಥಾನ ಪೂಜೆ ಮಧ್ಯಾಹ್ನ ೧ಕ್ಕೆ ಮಠಾಧಿಕಾರಿಗಳಾದ ಎನ್.ಆನಂದ್ ಆಚಾರ್ ಅವರಿಂದ ಪ್ರವಚನ ನಡೆಯಲಿದೆ ಎಂದರು.


ಜ.೩೧ ರಂದು ಸಂಜೆ ೭ಕ್ಕೆ ಖ್ಯಾತ ದಾಸವಾಣಿ ಕಲಾವಿದ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ನಡೆಯಲಿದ್ದು ಫೆ.೧ ರಿಂದ ೨ರವರಗೆ ಸಂಜೆ ೭ ಕ್ಕೆ ಶ್ರೀ ಹರಿಆಚಾರ್ ವಾಳ್ವೇಕರ್ ಹುಬ್ಬಳ್ಳಿಯವರಿಂದ ಪ್ರವಚನ ಜರುಗಲಿದ್ದು ಫೆ.೩ ಮತ್ತು ೪ ರಂಧು ಸಂಜೆ ೭ಕ್ಕೆ ಹರಿಣೀ ಪಗಡಾಲ ಕರ್ನೂಲು ಅವರಿಂದ ಪ್ರವಚನ ನಡೆಯಲಿದೆ ಎಂದರು.

ಫೆ.೫ ರಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಸಂಜೆ.೫.೩೦ಕ್ಕೆ ನಗರದ ಜವಾಹರ ನಗರ ರಾಯರ ಮಠದಿಂದ ಪ್ರಮುಖ ಬೀದಿಗಳ ಮುಖಾಂತರ ಮುಂಗ್ಲಿ ಪ್ರಾಣದೇವರ ದೇವಸ್ಥಾನವರೆಗೆ ಶ್ರೀಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದ ಅವರು ಫೆ.೬ ರಂದು ಮಧ್ವ ನವಮಿ ಅಂಗವಾಗಿ ಬೆಳಿಗ್ಗೆ ಪವಮಾನ ಹೋಮ,ರಥೋತ್ಸವ, ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ನಂತರ ಅನುಗ್ರಹ ಸಂದೇಶ ಸರ್ವರಿಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.


ಜ.೭ ರಿಂದ ೯ರವರೆಗೆ ಸಂಜೆ ೭ಕ್ಕೆ ಗೋಪಾಲ ಆಚಾರ್ ಸಿರವಾರ್ ರಿಂದ ಪ್ರವಚನ ನಡೆಯಲಿದೆ ಎಂದ ಅವರು ಜ೧೦ ರಿಂದ ೧೨ ರವರೆಗೆ ಸಂಜೆ ೭ಕ್ಕೆ ಗುರುರಾಜ ದಾಸ್ ಬೆಂಗಳೂರು ಅವರಿಂದ ಪ್ರವಚನ ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತ್, ರಾಮಾಚಾರ್, ಜಯಕುಮಾರ್ ಗಬ್ಬೂರು, ಅನಿಲ ಕುಮಾರ್, ಶ್ರೀಹರಿ, ಇದ್ದರು.


Comments

Popular posts from this blog