ನಗರದ ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಪುನಸ್ಕಾರ.
ಜಯ ಧ್ವಜ ನ್ಯೂಸ್, ರಾಯಚೂರು, ಜ.10-
ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು.
ಎನ್.ಜಿ.ಓ ಕಾಲೋನಿ ವೆಂಕಟರಮಣ ದೇವಸ್ಥಾನ, ನವೋದಯ ವೆಂಕಟೇಶ್ವರ ದೇವಸ್ಥಾನ, ಆಶಾಪೂರು ರಸ್ತೆಯ ಇಸ್ಕಾನ್ ದೇವಸ್ಥಾನ, ರಾಜಮಾತಾ ದೇವಸ್ಥಾನ, ಉಪ್ಪಾರವಾಡಿ ವೆಂಕಟೇಶ್ವರ, ನಗರೇಶ್ವರ ದೇವಸ್ಥಾನ, ಬದರಿನಾರಾಯಣ ದೇವಸ್ಥಾನ, ಜೋಡು ವಿರಾಂಜಿನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು.
ವೈಕುಂಠ ಏಕಾದಶಿ ನಿಮಿತ್ಯ ಉತ್ತರ ದ್ವಾರದ ಮೂಲಕ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಸಾವಿತ್ರಿ ಕಾಲೋನಿ ಜೋಡು ವಿರಾಂಜಿನೇಯ ದೇವಸ್ಥಾನದಲ್ಲಿ ಅಖಂಡ ಭಾಗವತ ಪ್ರವಚನ ನೆರವೇರಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ದೇವಸ್ಥಾನ ಆವರಣಗಳನ್ನು ಪುಷ್ಪಗಳಿಂದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ನೂಕು ನುಗ್ಗಲು ಉಂಟಾಗದಂತೆ ಸರದಿ ಸಾಲಿನಲ್ಲಿ ಸಾಗುವುದಕ್ಕೆ ಅನುಕೂಲ ಕಲ್ಪಿಸಲಾಗಿತ್ತು.ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಕೃತಾರ್ಥರಾದರು.
Comments
Post a Comment