ಭಕ್ತಿಯ ಸೇತುವೆ ನಿರ್ಮಿಸಿ ಗೋವಿಂದನನ್ನು ತೋರಿಸಿದ ದಾಸರು  ಗೋಪಾಲ ದಾಸರು- ಮುರಳಿಧರ ಕುಲಕರ್ಣಿ.       ಜಯಧ್ವಜ ನ್ಯೂಸ್ , ರಾಯಚೂರು,ಜ.23- ಭಕ್ತಿಯಲ್ಲಿ ಭಾಗಣ್ಣ ನೆಂದು ಪ್ರಸಿದ್ಧಿಯಾಗಿದ್ದ, ದಾಸ ಶ್ರೇಷ್ಠರಾದ ಶ್ರೀ ಗೋಪಾಲದಾಸರು ಭಕ್ತಿ ಮಾರ್ಗದ ಮೂಲಕ ಪ್ರತಿಯೊಬ್ಬರಿಗೂ  ಭಕ್ತಿ ಸೇತುವೆಯನ್ನು ನಿರ್ಮಿಸಿ ಪರಮಾತ್ಮನಾದ ಗೋವಿಂದ ನನ್ನು ತೋರಿಸಿಕೊಟ್ಟ ವರೇಣ್ಯರು ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಅವರು ಹೇಳಿದರು.

   ಅವರು ನಿನ್ನೆ ಬುಧವಾರ ಸಂಜೆ ರಾಯಚೂರು ನಗರದ ಜವಾಹರ ನಗರದ ಬಯಲುಆಂಜನೇಯ ದೇವಸ್ಥಾನದಲ್ಲಿ ಜರುಗಿದ ಶ್ರೀ ಗೋಪಾಲ ದಾಸರ ಮಧ್ಯರಾಧನೆಯ  ಕಾರ್ಯಕ್ರಮದಲ್ಲಿ ಮಾತನಾಡಿದರು.

  ದಾಸ ಸಾಹಿತ್ಯದ ಎರಡನೇ ಘಟ್ಟದಲ್ಲಿ ಈ ಸಾಹಿತ್ಯಕ್ಕೆ  ಸೈಧ್ಯಾಂತಿಕ ಮಹತ್ವ ಕೊಟ್ಟು

ನೂರಾರು ಸಂಕೀರ್ತನೆಗಳನ್ನು, 

ಉಗಾಭೋಗಗಳನ್ನು,ಸುಳಾದಿಗಳನ್ನು, ಮುಂಡಿಗೆಗಳನ್ನು, ಚಕ್ರಾಬ್ಜ ಮಂಡಲದ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದಂತಹ ಪ್ರಾತಸ್ಮರಣೀಯ ಹರಿದಾಸರಾಗಿದ್ದಾರೆ.  ಇವರು  ಶ್ರೀ ವಿಜಯದಾಸರ ಶಿಷ್ಯರಾಗಿ, ಶ್ರೀ ಜಗನ್ನಾಥ ದಾಸರ ಗುರುಗಳಾಗಿ ದಾಸ ಪರಂಪರೆಯನ್ನು ಬೆಳೆಸಿದ ದಾಸ ಚತುಷ್ಠಿಯರಲ್ಲಿ ಒಬ್ಬರಾಗಿದ್ದಾರೆ. ಎಂದು ಹೇಳಿದರು. 

   ಈ ಕಾರ್ಯಕ್ರಮದಲ್ಲಿ  ರವೀಂದ್ರ ಕುಲಕರ್ಣಿ ಅವರು ಮಾತನಾಡಿ ಶ್ರೀ ಗೋಪಾಲ ದಾಸರ ಸಂಕೀರ್ತನೆಗಳು  ಭಕ್ತಿ ಮಾರ್ಗವನ್ನು ಬಿಂಬಿಸುವ, ದೇವರನ್ನು ಕಾಣುವ ಸುಲಭದ ಮಾರ್ಗ ದಿಂದ ಇಂದಿಗೂ ಪ್ರಸ್ತುತವಾಗಿವೆ. ಎಂದು ಹೇಳಿದರು. 


    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಕಲ್ಲೂರ್ ವಹಿಸಿ ಶ್ರೀ ಗೋಪಾಲ ದಾಸರು ರಚಿಸಿದ ಸಂಕೀರ್ತನೆಗಳನ್ನು  ಹಾಡಿ ಪ್ರಸ್ತುತಪಡಿಸಿದ್ದರು.

   ಕಾರ್ಯಕ್ರಮವನ್ನು ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರಾಚಾರ್ಯ ಮುಂಗ್ಲಿ ಯವರು  ಉದ್ಘಾಟಿಸಿ 

ಶ್ರೀ ಗೋಪಾಲ ದಾಸರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. 

 ಈ ಸಂದರ್ಭದಲ್ಲಿ, ಶರತ್ ಚಂದ್ರ, ವಾಸುಕಿ ಕರಣಂ, ಶ್ರೀಮತಿ ರತ್ನ ಕಲ್ಲೂರ್, ಇಂದಿರಾ ಬಾಯಿ ಸಂಗಮ್, ಇವರಿಂದ ದಾಸವಾಣಿ ಕಾರ್ಯಕ್ರಮ ಜರಗಿತು. 

  ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಹುಣಸಿಗಿ, ಬಿ ಪ್ರಾಣೇಶ್ ಶೆಟ್ಟಿ, ನಾಗರತ್ನ ಕಲ್ಲೂರ್, ಮುಂತಾದವರು ಉಪಸ್ಥಿತರಿದ್ದರು.

Comments

Popular posts from this blog