ವಾರ್ತಾ ಇಲಾಖೆಯ ನೂತನ ಬಸ್‌ಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಹಸಿರು ನಿಶಾನೆ


ಜಯಧ್ವಜ ನ್ಯೂಸ್ ,ರಾಯಚೂರು ಜ.24-

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2024-25ನೇ ಸಾಲಿನಲ್ಲಿ ರಾಯಚೂರಿನ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಮಂಜೂರಾದ ನೂತನ ಮಿನಿ ಬಸ್‌ಗೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹಸಿರು ನಿಶಾನೆ ತೋರಿದರು.


ಜನವರಿ 24ರಂದು, ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಬಸ್ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಹೂವು, ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಬಸ್‌ನ ಪ್ರವೇಶ ದ್ವಾರದಲ್ಲಿ ರಿಬ್ಬನ್ ಕತ್ತರಿಸಿ ಪತ್ರಕರ್ತರೊಂದಿಗೆ ಬಸ್ ಏರಿದರು.


ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಮಾನವಿ ಶಾಸಕರಾದ ಹಂಪಯ್ಯ ನಾಯಕ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಅವರು ಸಹ ವಾರ್ತಾ ಇಲಾಖೆಯ ಬಸ್ ಏರಿ, ಸಚಿವರು ಹಾಗೂ ಪತ್ರಕರ್ತರೊಂದಿಗೆ ಸಂಚರಿಸಿ ಸಂತೋಷ ವ್ಯಕ್ತಪಡಿಸಿದರು.


ರಾಯಚೂರು ವಾರ್ತಾ ಇಲಾಖೆಗೆ ಬಸ್ ನೀಡಬೇಕು ಎಂದು ರಾಯಚೂರು ಪತ್ರಕರ್ತರು ಬಹು ವರ್ಷಗಳಿಂದ ಬೇಡಿಕೆಯಿತ್ತು. ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹಾಗು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರ ವಿಶೇಷ ಪ್ರಯತ್ನ ಮತ್ತು ರಾಯಚೂರು ಜಿಲ್ಲೆಯ ಈಗಿನ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ವಿಶೇಷ ಕಾಳಜಿಯಿಂದಾಗಿ ಇದೀಗ, ವಾರ್ತಾ ಇಲಾಖೆಗೆ ನೂತನವಾಗಿ ಬಸ್ ಬಂದಿರುವುದು ಸಂತೋಷ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯ ವಾರ್ತಾ ಸಹಾಯಕರಾದ ಗವಿಸಿದ್ದಪ್ಪ ಹೊಸಮನಿ ಅವರು ತಿಳಿಸಿ ಎಲ್ಲರಿಗೂ ಸ್ವಾಗತಿಸಿದರು.


ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ,ಮುಖಂಡರಾದ ರಝಾಕ್ ಉಸ್ತಾದ್, ಅಸ್ಲಂಪಾಶಾ, ಸಂಪಾದಕರಾದ ಅರವಿಂದ ಕುಲಕರ್ಣಿ,  ಕಾರ್ಯನಿರತ  ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಗುರುನಾಥ, ಪತ್ರಕರ್ತರಾದ , ವಿಶ್ವನಾಥ್ ಸಾಹುಕಾರ್, ಗುರುರಾಜ, ಜಯಕುಮಾರ್ ದೇಸಾಯಿ ಕಾಡ್ಲೂರು,  ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಹಾಗೂ ಟಿವಿ ವಾಹಿನಿಗಳ ವರದಿಗಾರರು ಮತ್ತು ವಿಡಿಯೋ ಜರ್ನಲಿಸ್ಟ್  ಸಮಾರಂಭದಲ್ಲಿ ಹಾಜರಿದ್ದು ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಅಭಿನಂದಿಸಿದರು.

ಈ ವೇಳೆ ರಾಯಚೂರ ವಾರ್ತಾ ಇಲಾಖೆಯ  ಪ್ರಕಾಶ, ಪ್ರಥಮ ದರ್ಜೆ ಸಹಾಯಕರಾದ ಲಿಂಗರಾಜ್, ಹೊರಗುತ್ತಿಗೆ ನೌಕರರಾದ ರಮೇಶ, ವೆಂಕಟೇಶ, ಅಪ್ರೆಂಟಿಸ್ ತರಬೇತುದಾರರಾದ ನವೀನ್ ಹಾಗೂ ಇನ್ನೀತರರು ಇದ್ದರು.

Comments

Popular posts from this blog