ಮಾನವ ಕುಲಕ್ಕೆ ಸ್ಪೂರ್ತಿ ತುಂಬಿದ ಭಕ್ತಿ ಪಂಥದ ಮಹಾ ಚೇತನ ಶ್ರೀ ಪುರಂದರ ದಾಸರು- ಮುರಳಿಧರ ಕುಲಕರ್ಣಿ
ಜಯಧ್ವಜ ನ್ಯೂಸ್ , ರಾಯಚೂರು, ಜ.29- ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಲು ಬೇಡ ಹುಚ್ಚಪ್ಪ ಗಳಿರಾ ! ಎಂದು ಸಾರುತ್ತ ಮೂಲಭೂತವಾಗಿ ಮಾನವ ಧರ್ಮ ಮಾನವೀಯತೆಗಳ ಸಾಹಿತ್ಯವನ್ನು ನೀಡಿ ಮನಕುಲಕ್ಕೆ ಹೊಸ ಸ್ಪೂರ್ತಿಯನ್ನು ತುಂಬಿದ ದಾಸರೆ ಪುರಂದರದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಅವರು ಹೇಳಿದರು.
ಅವರು ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಬುದುವಾರ ಸಂಜೆ ಜರುಗಿದ ಶ್ರೀ ಪುರಂದರ ದಾಸರ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತ ನಾಡಿದರು.
ಈಸಬೇಕು ಇದ್ದು ಜಯಿಸಬೇಕು, ಎಂದು ಆತ್ಮಸ್ಥೈರ್ಯವನ್ನು ತುಂಬುತ್ತಾ, ಸಾಲ ಮಾಡಲಿ ಬೇಡ ಸಾಲದೆಂದೆನ ಬೇಡ,
ಸಂಸಾರವೆಂಬ ಸೌಭಾಗ್ಯ ನನಗಿರಲಿ ಎಂಬ ಸಾಮಾಜಿಕ ಮೌಲ್ಯವನ್ನು ಬಿತ್ತಿದರು. ಅದೇ ರೀತಿ
ಸಮಾಜದಲ್ಲಿರುವ ಹಲವಾರು ಅಂಕುಡೊಂಕುಗಳನ್ನು ಎದೆಗಾರಿಕೆಯಿಂದ ಖಂಡಿಸಿದ ಮಹಾನುಭಾವರು ಶ್ರೀ ಪುರಂದರ ದಾಸರು ಎಂದ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಮಕಲಾ ಪರಿಷತ್ತಿನ ಅಧ್ಯಕ್ಷರಾದ ವೆಂಕಟರಾವ್ ಕುಲಕರ್ಣಿಯವರು ಮಾತನಾಡಿ, ಪುರಂದರದಾಸರು ನಾಲ್ಕು ಲಕ್ಷಕ್ಕೂ ಅಧಿಕ ಸಂಕೀರ್ತನೆಗಳನ್ನು ಸುಳಾದಿಗಳನ್ನ ಸಾಹಿತ್ಯದ ಎಲ್ಲಾ ಪ್ರಕಾರದ ಗೀತೆಗಳನ್ನು ರಚಿಸಿದ್ದಾರೆ ನಮಗೆ ಲಭ್ಯ ಇರುವುದು ಕೇವಲ 25 ಸಾವಿರ ಮಾತ್ರ ಅವರ ಬೃಹದಾಕಾರವಾದ ಸಾಹಿತ್ಯವನ್ನು ಉಪನಿಷತ್ತಿಗೆ ಹೋಲಿಸಿ ಪುರಂದರೋ ಪನಿಷತ್ತು ಎಂದು ಕರೆದಿದ್ದಾರೆ.
ಅವರ ಪ್ರತಿಯೊಂದು ಸಂಕೀರ್ತನೆಗಳಲ್ಲಿ ಮಾನವೀಯ ಮೌಲ್ಯಗಳು
ಮಾನವತಾ ವಾದಿತನವನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಯಕುಮಾರ್ ದೇಸಾಯಿ ಕಾಡ್ಲೂರು, ಮಾತನಾಡಿ ಪುರಂದರ ದಾಸರ ಸಂಕೀರ್ತನೆಗಳಲ್ಲಿ ಸಂಗೀತದ ಸುಗಂಧವನ್ನು ಕಾಣುತ್ತೇವೆ ಅವರ ಪ್ರತಿಯೊಂದು ಸಾಂಗತ್ಯ, ಷಟ್ಪದಿ ,ಕಂದ , ಸ್ವರ ಲಯ ಮುಂತಾದವುಗಳಿಂದ ಕೂಡಿಕೊಂಡಿವೆ,ಅದಕ್ಕಾಗಿ ಅವರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯರಾದ ರಮಾ ಕಾಂತ ಕುಲಕರ್ಣಿ, ನರಸಿಂಹಮೂರ್ತಿ, ಕುಲಕರ್ಣಿ ಇವರುಗಳು ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಸುರೇಶ್ ಕಲ್ಲೂರ್ ಅವರು ವಹಿಸಿ ಶ್ರೀ ಪುರಂದರ ದಾಸರ ಸಂಕೀರ್ತನೆಗಳನ್ನು ಶುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ಪುರಂದರ ದಾಸರ ಭಾವಚಿತ್ರಕ್ಕೆ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರಾಚಾರ್ಯ ಮುಂಗಲಿ ಅವರು ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಕುಲಕರ್ಣಿ, ವಾಸುಕಿ ಕರಣಂ ಸುಷ್ಮಾ, ಇವರಿಂದ ದಾಸವಾಣಿ ಜರುಗಿತು.
ಈ ಸಂದರ್ಭದಲ್ಲಿ ಪ್ರಸನ್ನ ಆಲಂಪಲ್ಲಿ, ಕೃಷ್ಣಮೂರ್ತಿ ಹುಣಸಿಗಿ, ಸಾವಿತ್ರಿ ಕನಕವೀಡು ಮುಂತಾದವರು ಉಪಸ್ಥಿತರಿದ್ದರು.
Comments
Post a Comment