ಸಿಂಧನೂರು ತಾಲೂಕಿನ 1064 ಎಕರೆ ಹೆಚ್ಚುವರಿ ಭೂಪ್ರಕರಣ: 45 ವರ್ಷ ಕಳೆದರೂ ವಿಚಾರಣೆಗೆ ತೆಗೆದುಕೊಳ್ಳದ ನ್ಯಾಯಾಧೀಕರಣ ಧೋರಣೆ ಖಂಡಿಸಿ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗ- ಆರ್. ಮಾನಸಯ್ಯ
ಜಯ ಧ್ವಜ ನ್ಯೂಸ್, ರಾಯಚೂರು, ಮಾ.27- ಸಿಂಧನೂರು ತಾಲೂಕಿನ 1064 ಎಕರೆ ಹೆಚ್ಚುವರಿ ಭೂ ಪ್ರಕರಣದಲ್ಲಿ 45 ವರ್ಷ ಕಳೆದರು ವಿಚಾರಣೆಗೆ ತೆಗೆದುಕೊಳ್ಳದ ನ್ಯಾಯಾಧೀಕರಣ ಧೋರಣೆ ಖಂಡಿಸಿ ಮುಖ್ಯ ಮಂತ್ರಿ ಭೇಟಿಗೆ ನಿಯೋಗ ತೆರಳಲು ನಿರ್ಧರಿಸಲಾಗಿದೆ ಎಂದು ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯ ಆರ್. ಮಾನಸಯ್ಯ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಭೂ ಸುಧಾರಣೆ ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹಿಸಿ ಏಪ್ರಿಲ್ ತಿಂಗಳಿನಿಂದ ಹೋರಾಟ ಮತ್ತೊಮ್ಮೆ ನಡೆಸಲು ನಡೆಸಲು ಚಿಂತಿಸಲಾಗಿದೆ ಎಂದರು. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪದೇ ಪದೇ ಹೆಮ್ಮೆಯಿಂದ ಹೇಳಿಕೊಳ್ಳುವ ಏಕೈಕ ಸಾಧನೆ ಎಂದರೆ ದೇವರಾಜು ಅರಸು ಸರಕಾರ ಜಾರಿಗೆ ತಂದ ಭೂಸುಧಾರಣೆ. ಆದರೆ, ಈ ಭೂಸುಧಾರಣೆಯಿಂದ ಭೂರಹಿತ ದಲಿತರಿಗೆ,ಸಾಗುವಳಿದಾರರಿಗೆ ಭೂಮಿ ಸಿಗಲಿಲ್ಲ. ಭೂನ್ಯಾಯಾಧಿಕರಣ ಹೈಕೋರ್ಟ್ ಹಾಗೂ ಮತ್ತೆ ಭೂನ್ಯಾಯಾಧಿಕರಣವಿಚಾರಣೆ ಹೆಸರಲ್ಲಿರಾಜ್ಯದಲ್ಲಿಬಹುತೇಕ ಹೆಚ್ಚುವರಿ ಭೂಮಿ ದೊಡ್ಡದೊಡ್ಡಭೂಮಾಲೀಕರ ಕೈಯಲ್ಲಿಯೆ ಉಳಿದಿವೆ ಎಂದು ದೂರಿದರು.
ಇದಕ್ಕೆ ಜ್ವಲಂತ ಸಾಕ್ಷಿಯಾಗಿ ಸಿಂಧನೂರು ತಾಲೂಕ ಜವಳಗೇರ ಭೂಪ್ರಕರಣವಾಗಿದೆ.ಜವಳಗೇರದ ಸಿದ್ದಲಿಂಗಮ್ಮ ಗಂ/ ವೆಂಕಟರಾವ್ ಪ್ರಕರಣದಲ್ಲಿ ಸಿಂಧನೂರು ನ್ಯಾಯಾಧಿಕರಣವು
1981ರಂದು ತೀರ್ಪು ನೀಡಿ, 1064 ಎಕರೆ ಭೂಮಿಯನ್ನು ಹೆಚ್ಚುವರಿ ಎಂದು ಘೋಷಿಸಿದೆ. ಅಲ್ಲದೆ, ಸದರಿಭೂಮಿಯನ್ನು ಸಿದ್ದಲಿಂಗಮ್ಮನಿಗೆ ಸಂಬಂಧವೇ ಇಲ್ಲದ ರುದ್ರಭೂಪಾಲ ನಾಡಗೌಡ, ವೆಂಕಟರಾವ್ ನಾಡಗೌಡ ಹಾಗೂ ರಾಜಶೇಖರ ನಾಡಗೌಡ ಇವರು ಕಂದಾಯ ಇಲಾಖೆಯಲ್ಲಿಮುಟೇಶನ್ ಎಂಟ್ರಿ ಮಾಡಿಸದೆ ಅಕ್ರಮವಾಗಿ ತಮ್ಮ ಮಕ್ಕಳಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಹೇಳಿದೆ. ಈ ವರ್ಗಾವಣೆಯನ್ನು-ಮಾರಾಟಗಳನ್ನು ರದ್ದುಪಡಿಸಿ ಸದರಿ1064ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಲು ತೀರ್ಪು ಪ್ರಕಟಿಸಿದೆ ಎಂದರು.
ಆದರೆ, ಈ ಭೂನ್ಯಾಧಿಕರಣ ತೀರ್ಪಿನ ವಿರುದ್ಧ ಸಿದ್ದಲಿಂಗಮ್ಮನ ನಕಲಿ ವಾರಸ್ಸುದಾರರು ಉಚ್ಚನ್ಯಾಯಾಲಯದಮೆಟ್ಟಿಲೇರಿದರು. 1981ರಲ್ಲಿಯೆ ಉಚ್ಚನ್ಯಾಯಾಲಯವು ಸದರಿ ತೀರ್ಪಿಗೆ ತಡೆಯಾಜ್ಞೆ ನೀಡಿ, ಇಡೀ ಪ್ರಕರಣವನ್ನು ಮರುವಿಚಾರಣೆ ಮಾಡುವಂತೆ ಆದೇಶ ಮಾಡಿದೆ. ಆದರೆ, ಯಾವ ನ್ಯಾಯಾಧಿಕರಣವು 1064 ಎಕರೆ ಜಮೀನನ್ನು ಹೆಚ್ಚುವರಿಎಂದು ಘೋಷಿಸಿತ್ತೋ ಅದೇ ನ್ಯಾಯಾಧಿಕರಣವು ಮರು ವಿಚಾರಣೆ ಮಾಡಿದರೆ, ಮತ್ತದೆ ತೀರ್ಪು ಸಿಗಲಿದೆ ಎಂದು ಮನಗಂಡ ನಾಡಗೌಡರು ನ್ಯಾಯಾಧಿಕರಣದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು ಇದರ ಫಲಿತಾಂಶವಾಗಿ1981ರಿಂದ 2025ರವರೆಗೆ ಅಂದರೆ 44 ವರ್ಷಗಳ ಕಾಲ ಸದರಿ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳದೆ ಸದರಿಭೂಮಿಯನ್ನು ನಾಡಗೌಡರ ಕೈಗೆ ಕೊಟ್ಟು ಕಾನೂನಿಗೆ ದ್ರ ೋಹ ಮಾಡಿದೆ.ಸಿಪಿಐ(ಎಂಎಲ್) ರೌಡ್ ಸ್ಟಾರ್ ಪಕ್ಷ ಮತ್ತುಕರ್ನಾಟಕ ರೈತ ಸಂಘಗಳು ಕಳೆದ ವರ್ಷ ನಡೆಸಿದ 6 ತಿಂಗಳುಗಳನಿರಂತರ ಹೋ ರಾಟದ ಫಲವಾಗಿ ನ್ಯಾಯಾಧಿಕಾರಣದಲ್ಲಾದ ಈ ದ್ರೋಹ ಬಯಲಿಗೆ ಬಿದ್ದಿದೆ. ನ್ಯಾಯಾಧಿಕಾರ ರಚನೆಯಾಗಿ ಆರು ತಿಂಗಳಾದರು ಸಿಂಧನೂರು ತಹಶೀಲ್ದಾರ ಅರುಣ ದೇಸಾಯಿ ಸದರಿ ಪ್ರಕರಣವನ್ನು ನ್ಯಾಯಾಧೀಕರಣದ ಮುಂದೆ ಮಂಡಿಸುತ್ತಿಲ್ಲ. ನ್ಯಾಯಾಧಿಕರಣದ ಅಧ್ಯಕ್ಷರಾದ ಎಸಿ ಬಸವಣ್ಯಪ್ಪನವರನ್ನು ಹಾಗೂ ಸಿಂಧನೂರು ತಹಶೀಲ್ದಾರರನ್ನು ಬೇಟಿ ಮಾಡಿದರೆ, ಪ್ರತಿವಾದಿಗಳ ಕೋರಿಕೆ ಮೇರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಸಿಂಧನೂರಿನ ಶಾಸಕ ಬಾದರ್ಲಿ ಹಂಪನಗೌಡರಿಗೆ ಪತ್ರ ನೀಡಿ ಚರ್ಚಿಸಲಾಗಿದೆ ಈ ಹಿಂದೆಸಿಂಧನೂರಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ನೀಡಿ ಪ್ರಕರಣದ ತೀವ್ರತೆಯನ್ನು ಮನವರಿಕೆ ಮಾಡಲಾಗಿದೆ. ಎಲ್ಲರೂ ಭೂನ್ಯಾಯಾಧಿಕರಣ ರಚನೆಯಾದ ಕೂಡಲೆ ಕ್ರಮ ಜರುಗಿಸಲಾಗುವುದು ಎಂದು ಭರವಸೆಕೊಟ್ಟಿದ್ದರು. ಭೂನ್ಯಾಯಾಧಿಕರಣ ರಚನೆಯಾಗಿ ಆರು ತಿಂಗಳಾದರೂ ಸದರಿ ಪ್ರಕರಣವನ್ನು ವಿಚಾರಣೆಗೆಕೈಗೆತ್ತಿಕೊಂಡಿರುವುದಿಲ್ಲ.ಹಾಗಾಗಿ, ಏಪ್ರಿಲ್ ಮೊದಲ ವಾರದಲ್ಲಿಮುಖ್ಯಮಂತ್ರಿಯವರಿಗೆ ನಮ್ಮ ನಿಯೋಗ ಬೇಟಿ ಮಾಡಿ ಈ ಪ್ರಕರಣದಕುರಿತು ತ್ವರಿತ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಹಾಗೆಯೆ, ಕರ್ನಾಟಕ ಸರಕಾರ ಎಂದಿರುವ ಜಮೀನುಗಳಲ್ಲಿಭೂರಹಿತರನ್ನು ಕಟ್ಟಿಕೊಂಡು ಮತ್ತೊ ಮ್ಮೆ ಭೂಸ್ವಾಧೀನ ಚಳುವಳಿ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂ. ಗಂಗಾಧರ, ರಾಜ್ಯ ಸಮಿತಿ ಸದಸ್ಯರು
ಸಿಪಿಐ(ಎಂಎಲ್)ರೆಡ್ ಸ್ಟಾರ್, ಜಿ.ಅಮರೇಶ, ಜಿಲ್ಲಾಧ್ಯಕ್ಷರು, ಟಿಯುಸಿಐ ರಾಯಚೂರು, ಸಂತೋಷ ಹಿರೇದಿನ್ನಿ, ಜಿಲ್ಲಾಉಪಾಧ್ಯಕ್ಷರು ಕರ್ನಾಟಕ ರೈತ ಸಂಘ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment