ಸವಿತಾ‌ ಸಮಾಜ: ಮಹಿಳಾ ದಿನಾಚರಣೆ ಅಂಗವಾಗಿ ಶಷ್ಠಿಪೂರ್ತಿ ಕಾರ್ಯಕ್ರಮ                                                                          ಜಯಧ್ವಜ ನ್ಯೂಸ್, ರಾಯಚೂರು,ಮಾ 24   ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಸವಿತಾ ಸಮಾಜ ಮಹಿಳಾ ಘಟಕದಿಂದ ರಾಯಚೂರು ನಗರದ ಮಡ್ಡಿಪೇಟೆಯಲ್ಲಿರುವ ಶ್ರೀ ಶಂಕು ಚಕ್ರ ಮಾರುತಿ ದೇವಸ್ಥಾನದಲ್ಲಿ ಇಂದು  ಶಷ್ಠಿಪೂರ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

                             ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಹಿರಿಯ ಜೋಡಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಜಿಂದಪ್ಪ ನಗರಾಧ್ಯಕ್ಷ  ಯಲ್ಲಮ್ಮ ಇಂದಿರಮ್ಮ, ತುಳಸಿ ,ರೇಖಾ, ಸಿ ಎ ಜ್ಯೋತಿ, ಗೀತಾ, ಸಮಾಜದ  ಹಿರಿಯರಾದ ಶ್ರೀನಿವಾಸ್ ನಾಗಲದಿನ್ನಿ ನಾಮ ನಿರ್ದೇಶಿತ ಮಹಾನಗರ ಪಾಲಿಕೆ ಸದಸ್ಯ ವೆಂಕಟೇಶ ವಲ್ಲೂರು, ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ  ಮತ್ತಿತರರು ಉಪಸ್ಥಿತರಿದ್ದರು.

Comments

Popular posts from this blog